Friday, May 15, 2009

ಸಂಜಯದೃಷ್ಟಿ

ಇದ್ದಕ್ಕಿದ್ದಹಾಗೆ ನಾನು ಧೃತರಾಷ್ಟ್ರ ಅನಿಸತೊಡಗಿತು ನನಗೆ. ಸಂಜಯ ನನ್ನ ಮುಂದೆ ನನಗೆ ಬೇಕಾದ ಕಣ್ಣುಗಳನ್ನು ತೆರೆದುಕೊಳ್ಳಲು ಸಿದ್ಧನಾಗಿ ಕೂತಿದ್ದ. ಹೀಗೆ ಅನ್ನಿಸಿದ ತಕ್ಷಣ ಟೀವಿ ಹಾಕಲು ಮನಸಾಗಲೇ ಇಲ್ಲ. ಮಗಳ ಬಳಿ ಹೋದೆ ಸಂಜಯನ ಹತ್ತಾರು ಕಣ್ಣುಗಳನ್ನು ತೆರೆದುಕೊಂಡು ಧೃತರಾಷ್ಟ್ರಳಾಗಿ ಮಗಳು ಬ್ರೌಸ್ ಮಾಡುತ್ತಾ ಕೂತಿದ್ದಳು. ಭಯವಾಯಿತು.
‘ಕಿಮಕುರ್ವತ ಸಂಜಯ?’ ಅಂತ ಕುರುಡ(ದೃಷ್ಟಿಹೀನ ಇನ್ನೂ ಒಳ್ಳೆಯ ಪದವಾ?) ಧೃತರಾಷ್ಟ್ರ ಅಂದಾಗಲೆಲ್ಲಾ ಸಂಜಯನು ಯಥಾವತ್ತಾಗಿ ರೋಬೋಟಿನ ಥರ ಯುದ್ದದ ಸ್ಥಿತಿಗತಿಗಳನ್ನು ವಿವರಿಸಿದ್ದನಾ? ಅಥವಾ ಒಂದೊಂದು ಪಕ್ಷವನ್ನು ಸಮರ್ಥಿಸುವ ಪತ್ರಿಕೆಯ ಥರ, ಟೀವಿ ಚಾನಲ್ಲಿನ ಥರ ತನ್ನೆಲ್ಲಾ ಪೂರ್ವಾಗ್ರಹಗಳು, ಅನುಮಾನ, ಆತಂಕ, ಅಭೀಪ್ಸೆ, ಸಮಯಸಾಧಕತನಗಳೊಡನೆ ನೋಡಿ ಹೇಳುತ್ತಿದ್ದನಾ? ಧೃತರಾಷ್ಟ್ರನ ಮಕ್ಕಳು ಸಾಯುತ್ತಾ ಬಂದಹಾಗೆಲ್ಲಾ ಹೇಳುವುದು ಎಷ್ಟು ಕಷ್ಟವಾಗಿರಬೇಕು? ಹಾಗೆ ನೋಡಿದರೆ ಮಹಾಭಾರತವನ್ನ ಯಾರ ಕಣ್ಣಿನಿಂದ ನೋಡಬೇಕು? ಹೊರಗಿನವನಾದ ಕೃಷ್ಣನ ಚಾಣಾಕ್ಷತನದಿಂದ? ಕೊನೆಗೂ ತಣಿಯದ ದ್ರೌಪದಿಯ ರೋಷದಿಂದ? ಯಾವಾಗಲೂ ಕಡೆಗಣಿಸಲ್ಪಟ್ಟ ದುರ್ಯೋಧನನ ಅತೃಪ್ತಿಯಿಂದ? ಅಥವಾ ಯಾವುದೋ ಪೂರ್ವ ಜನ್ಮದ ಶಾಪದಂತೆ ಯಾವ ಗಂಡಸಿನ ಪ್ರೀತಿಯನ್ನೂ ಅವಳದನ್ನಾಗಿಸಿಕೊಳ್ಳಾಗದ ಅತೃಪ್ತೆ ಕುಂತಿಯ ಕಣ್ಣಿನಿಂದಲೋ? ಇಲ್ಲಾ ನಲ್ಲಪಿಳ್ಳೈ? ರನ್ನ? ಪಂಪ? ಕುಮಾರವ್ಯಾಸ? ಯಾರಿಗಾದರೂ ನನಗೂ ಅದಕ್ಕೂ ಸಂಬಂಧವಿಲ್ಲ ಹಾಗೆ ಸುಮ್ಮನೆ ನೋಡ್ತಿದಿನಿ ಅಂತ ನೋಡೋದಕ್ಕೆ ಸಾಧ್ಯವಾ? ಯಾರಿಗೆ ಹಾಗೆ ಎಲ್ಲವನ್ನೂ ನಿರ್ವಿಕಾರವಾಗಿ ಯಾರ ಪಕ್ಷವನ್ನೂ ವಹಿಸದೆ, ಬಿಟ್ಟುಕೊಡದೆ, ವೈಭವೀಕರಿಸದೆ, ಹೀಗಳೆಯದೆ ಸುಮ್ಮನೆ ನೋಡಲು ಸಾಧ್ಯವಿದೆ?


ಹಿಂಗೆಲ್ಲಾ ಕೇಳಿಕೊಂಡಮೇಲೆ ಹಾಗೆ ನೋಡಬೇಕಾದದ್ದಾದರೂ ಏನಕ್ಕೆ ಪ್ರಶ್ನೆ ಮುಡುತ್ತೆ. ಅನುಮಾನವಾಗುತ್ತಿದೆ, ನಾನೇ ಎಲ್ಲವನ್ನೂ ನೋಡಬೇಕು ಅನ್ನಿಸುತ್ತಿದೆ.ಇಷ್ಟು ವರ್ಶವೂ ಬೇರೆಯವರ ಕಣ್ಣುಗಳಿಂದ ಲೋಕವನ್ನು ನೋಡುವುದೇ ಅಭ್ಯಾಸವಾಗಿಹೋಗಿದೆ. ಅಪ್ಪ ಅಮ್ಮ ಟೀಚರಿನಿಂದ ಮೊದಲುಗೊಂಡು ಪ್ರತಿಯೊಬ್ಬರೂ ಕಣ್ಣು ತೆರೆಯಲು ಬಿಡಲೇ ಇಲ್ಲ. ಮದುವೆಯಾದಮೇಲಂತೂ ಆ ಲೋಕವೆ ಬೇರೆ. ಅವನ ಕಣ್ಗಳಿಂದ ನೋಡಲು ಖುಶಿಯಾಗುತ್ತಿತ್ತು. ಅವನು ತನ್ನ ಕಣ್ಣುಗಳಿಂದ ತೋರಿಸಿದ್ದನ್ನು ನಾನೇ ನೋಡಿದಂತೆ ನನ್ನ ಸ್ನೇಹಿತೆಯರಿಗೆಲ್ಲಾ ಹೇಳುತ್ತಿದ್ದೆ. ಅವನಾದರೂ ತನ್ನ ಕಣ್ಣುಗಳಿಂದ ನೋಡುತ್ತಾನಾ ಅಥವಾ ಅವನಿಗೂ ಧೃತರಾಷ್ಟ್ರನ ಕುರುಡುಗಣ್ಣು, ಸಂಜಯನ ಸಹಾಯವೋ? ಹಾಗೆ ನೋಡಿದರೆ ಯಾರು ಸಂಜಯ ಯಾರು ಧೃತರಾಷ್ಟ್ರ? ಪ್ರತಿಯೊಬ್ಬ ಧೃತರಾಷ್ಟ್ರನಿಗೂ ಲಕ್ಷಾಂತರ ಸಂಜಯರು. ನಿಜವಾಗಲೂ ಎಲ್ಲದನ್ನೂ ನೋಡುವವರ್ಯಾರು? ನನಗೆ ಹಾಗೆ ಎಲ್ಲದನ್ನೂ ಮೇಲಿನಿಂದ ನೋಡಲು, ನಿರ್ಧರಿಸಲು ಸಾಧ್ಯವಾ? ಬೇರೆಯವರೆಲ್ಲರ ಕಣ್ಣುಗಳಿಂದ ನೋಡಿದುದರಿಂದ ದೃಷ್ಟಿ ಮಂಜಾಗಿದೆ ಕಣ್ಣುಗಳಿಗೆ ಪೊರೆ ಬಂದಿವೆ. ಸತ್ಯ ಯಾವುದು ಸುಳ್ಳ್ಯಾವುದು ತಿಳಿಯುತ್ತಿಲ್ಲ. ಹೋಗಲಿ ನನಗೇನನ್ನಿಸುತ್ತಿದೆ ಎಂದೂ ಗೊತ್ತಾಗುತ್ತಿಲ್ಲ. ಗಾಂಧಾರಿ ಕಣ್ಣಿಗೆ ಕಟ್ಟಿದ ಬಟ್ಟೆಯನ್ನು ಕಳಚಬೇಕು. ಧೃತರಾಷ್ಟ್ರ ಕಾಡಿನಲ್ಲಿ ಧೀರ್ಘ ತಪಸ್ಸು ಮಾಡಿಯಾದರೂ ದೃಷ್ಟಿ ಪಡೆಯಬೇಕು.


ಸ್ವಲ್ಪ ಹೊತ್ತು ಕಣ್ಣುಮುಚ್ಚಿಕೊಂಡು ಕೂತೆ. ಕಣ್ಣುಮುಚ್ಚಿಕೊಂಡಾಗ ಹೇಗೆ ಕಾಣುತ್ತೀನಿ ನೋಡಬೇಕೆನ್ನಿಸಿತು. ಮೊಬೈಲ್ನಲ್ಲಿ ಫೋಟೋ ತೆಗೆದುಕೊಂಡು ನೋಡಿದೆ. ಫೋಟೋ ಯಾಕೋ ನೀನು ಕಣ್ಣು ಮುಚ್ಚಿಕೊಂಡರೂ ಅಷ್ಟೇ ಕಣ್ಣುಬಿಟ್ಟಿದ್ದರೂ ಅಷ್ಟೆ ಎರೆಡೂ ಒಂದೇ! ಅಣಗಿಸಿದ ಹಾಗಾಯಿತು. ಮಗ ಕಾಲೇಜಿನಿಂದ ಬಂದ, ಬಾಗಿಲು ತೆರೆದೆ ಥೇಟ್ ಸಂಜಯನಂತೆ ಕಂಡ. ಅತ್ತೆಯ ಕಣ್ಣಲ್ಲಿ ಸಂಜಯನ ನೆರಳು. ಆಫೀಸಿನಿಂದ ಬರುತ್ತಲೇ ಇವರು ಅಂದಿದ್ದೇನು ‘ಸೇನಯೋರುಭಯೋರ್ ಮಧ್ಯೇ ರಥಂ ಸ್ಥಾಪಯಮೇಚ್ಚ್ಯುತಾ’ ಅಂತಲಾ?

{ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿತ್ತು :-)}

20 comments:

Unknown said...

ಯಾರಿಗಾದರೂ ನನಗೂ ಅದಕ್ಕೂ ಸಂಬಂಧವಿಲ್ಲ ಹಾಗೆ ಸುಮ್ಮನೆ ನೋಡ್ತಿದಿನಿ ಅಂತ ನೋಡೋದಕ್ಕೆ ಸಾಧ್ಯವಾ? ಯಾರಿಗೆ ಹಾಗೆ ಎಲ್ಲವನ್ನೂ ನಿರ್ವಿಕಾರವಾಗಿ ಯಾರ ಪಕ್ಷವನ್ನೂ ವಹಿಸದೆ, ಬಿಟ್ಟುಕೊಡದೆ, ವೈಭವೀಕರಿಸದೆ, ಹೀಗಳೆಯದೆ ಸುಮ್ಮನೆ ನೋಡಲು ಸಾಧ್ಯವಿದೆ?

neat :-) absolutely we all depend on 'sanjaya' for seeing "most" of the things.

ಗಿರೀಶ್ ರಾವ್, ಎಚ್ (ಜೋಗಿ) said...

ಮೃಗನಯನೀ,
ಈ ಕಾನ್ಸೆಪ್ಟೇ ಚೆನ್ನಾಗಿದೆ. ಸದಾ ನಾವು ಯಾರೋ ಕೊಟ್ಟ ದೃಷ್ಟಿಯಿಂದ ನೋಡ್ತಿರುತ್ತೇವಾ.ಹಾಗನ್ನಿಸುತ್ತಲ್ಲ. ಲಂಕೇಶ್ ಮೇಷ್ಟ್ರು ಕೊಟ್ಟ ಲೋಕ ದೃಷ್ಟಿ ತುಂಬ ಕಾಲ ನನ್ನ ಕಣ್ಣಲ್ಲಿ ಹೂವಾಗಿ ಕೂತಿತ್ತು. ಒಬ್ಬೊಬ್ಬರಿಗೆ ಒಂದೊಂದು ಕಾಲಘಟ್ಟದಲ್ಲಿ ಒಬ್ಬೊಬ್ಬರು ಹೀಗೆ ಕನ್ನಡಕ ಕೊಡುತ್ತಾರೆ. ಕಣ್ಣು ಕೊಡುತ್ತಾರೆ. ಕಾಣ್ಕೆಯ ದಿಕ್ಕು ಸೂಚಿಸುತ್ತಾರೆ. ಅದನ್ನೆಲ್ಲ ಬದಿಗಿಟ್ಟು ನಾವಾಗಿಯೇ ನೋಡೋಕೆ ಸಾಧ್ಯ ಆಗುತ್ತಾ. ನಾನೂ ಯೋಚಿಸುತ್ತಿದ್ದೇನೆ.
ಬರೀತಿರು.
-ಜೋಗಿ

ವಿ.ರಾ.ಹೆ. said...

Very meaningful.
Liked it very much..

Thank u..

Anonymous said...

hey really very nice concept and presentation:)good work i hope u wrte more works like dis:)

sreelatha iyengar

sujatha said...

very nice ! keep it up.

sriphy said...

Very true, and this happens at different tiers.

First, people are inundated with information by the media (which is controlled by extraneous elements), but more importantly, at an individual/sub-conscious level. We are taught what to think and not how to think, which is very unfortunate. A couple of quotes come to my mind.

"I have never let my schooling interfere with my education" - Mark Twain

"Where is the Life we have lost in living?" - T S Eliot.

mruganayanee said...

@ಅಮರ್

thank you. I wonder is it just 'most' of the things or everything..

@ಜೋಗಿ

ನೀವು ಹೀಗೆ ಬರಿತಿರು ಅಂತ ಹೇಳ್ದಾಗ್ಲೆಲ್ಲ ಮತ್ತಷ್ಟು ಖುಷಿ.

mruganayanee said...

@ವಿಕಾಸ್

ಅಬ್ಭಾ ಅಂತು ನಿನಗಿಷ್ಟವಾಯಿತಲ್ಲ ..

Thank you

@putti and ammaa

thank you for the love dears

mruganayanee said...

@Shreevatsa

nice quotes. true. I feel we r also taught 'how to think' but in their way

ಅನಿಕೇತನ ಸುನಿಲ್ said...

ಮೃಗನಯನೀ,
ತುಂಬಾ ತುಂಬಾ ಚೆನ್ನಾಗಿದೆ.....ಏನ್ ಹೇಳಬೇಕೋ ಗೊತ್ತಾಗ್ತಿಲ್ಲ :)
ಇನ್ನೂ ಬರೀರಿ,ಕಾಯ್ತಿದೀವಿ,
ಸುನಿಲ್.

ಅನಿಕೇತನ ಸುನಿಲ್ said...

ಮೃಗನಯನೀ,
ತುಂಬಾ ತುಂಬಾ ಚೆನ್ನಾಗಿದೆ.....ಏನ್ ಹೇಳಬೇಕೋ ಗೊತ್ತಾಗ್ತಿಲ್ಲ :)
ಇನ್ನೂ ಬರೀರಿ,ಕಾಯ್ತಿದೀವಿ,
ಸುನಿಲ್.

Samudhyatha said...

Wow awesome !!! Liked it very much..

ಬಾಲು said...

Thumba chennagide. Very meaning full.

Haalada media galu, akka pakka da hogalu bhattaru... ivarellara abhipraaya dinda hora baralu beralu saadhyave illaveno...

Drutharashtra nige aadaru berava dhaari iddithu, atha sanjaya na drushti anne nambale bekittu.

Sharath Akirekadu said...

ಮೃಗನಯನಿ,
ಅದು ಹೇಗೆ ನಿಮಗೆ ಈ ತರದ ವಿಷಯ ಅಯ್ಕೆಗೆ ಸಿಗುತ್ತೊ? ಏಷ್ಟು ಅದ್ಬುತವಾಗಿ ಬರೆದಿದ್ದೀರಿ. ಬೇರೆಯವರ ಕಣ್ಣುಗಳ ಮುಖೇನ ದ್ರುತರಾಷ್ಟ್ರ ಆಗುವ ನಾವು ಸಂಜಯ ಯಾಕಾಗಬಾರದು ಎಂದು ಅದೆಷ್ಟೂ ಬಾರಿ ವಿಮರ್ಶಿಸಿದ್ದೆನೆ.ಮತ್ತೆ ಮತ್ತೆ ಚಿಂತಿಸುವಂತ ಬರಹ..

ಪ್ರೀತಿಯಿಂದ,
ಶರತ್.ಎ.

ಸಂಧ್ಯಾ said...

ಯಾವುದು ನನ್ನತನ ಅಂತ ಯೋಚನೆ ಮಾಡೋಕ್ ಹೋದ್ರೆ ಯಾವುದೂ ಅಲ್ಲ ಅನ್ಸುತ್ತೆ .. ಈ ಲೋಕದಲ್ಲಿ ನಾವು ಸಂಜಯ ಆಗೋಕ್ ಸಾಧ್ಯ ಇದೆಯಾ ಅಂತಾನೂ ಅನ್ಸುತ್ತೆ ... ಆದರೆ ನಾವು ದೃತರಾಷ್ಟ್ರ ಅನ್ನೋದು ನೂರಕ್ಕೆ ನೂರರಷ್ಟು ಸತ್ಯ :) :)

ಸಂಧ್ಯಾ said...

ಯಾವುದು ನನ್ನತನ ಅಂತ ಯೋಚನೆ ಮಾಡೋಕ್ ಹೋದ್ರೆ ಯಾವುದೂ ಅಲ್ಲ ಅನ್ಸುತ್ತೆ .. ಈ ಲೋಕದಲ್ಲಿ ನಾವು ಸಂಜಯ ಆಗೋಕ್ ಸಾಧ್ಯ ಇದೆಯಾ ಅಂತಾನೂ ಅನ್ಸುತ್ತೆ ... ಆದರೆ ನಾವು ದೃತರಾಷ್ಟ್ರ ಅನ್ನೋದು ನೂರಕ್ಕೆ ನೂರರಷ್ಟು ಸತ್ಯ :) :)

oduga said...

viewing through others eyes,nice concept,
views may differ but the perception?

ಜಲನಯನ said...

ಮೃಗನಯನಿ...ತೀಕ್ಷ್ಣ ದೃಷ್ಟಿಯವಳು..ಅವಳೇಕೆ..ಇತರರ ಕಣ್ಣಿಂದ ನೋಡುವ ಪ್ರಮೇಯ...ನಿಮ್ಮ ಮಾತು ಕೆಲವೊಮ್ಮೆ ನಿಜ ಅನಿಸುತ್ತದೆ..ಗೊತ್ತಿದ್ದೋ ಇಲ್ಲದೆಯೋ..ನಾವು ಹೀಗೆ ವರ್ತಿಸುವುದುಂಟು...ಇನ್ನು ಅವಲಂಬಿತರು (ಅಥವಾ ಹಾಗೆಂದು ಜನಜನಿತರು)...ಹಾಗೇ ಇರುವುದು ಸಹಜವೇ,,, ಬಸ್ಸಿಗೆ ಕಾಯ್ತಾ..ಬಸ್ಸಿನ ನಂಬರ್ ೧೭೧ ಅಂತ ಇರುತ್ತೆ..ಆದ್ರೂ..ಇದು ೧೭೧ ನಾ..ಅಂತ ಪಕ್ಕದವರ ಕಣ್ಣಿನ ನೆರವು ಬೇಡುತ್ತೇವೆ... ಚನ್ನಾಗಿದೆ..ಬರಹ..

Unknown said...

ನಿಮ್ಮ ಬರಹ ನನಗೆ ಒಂದು ಕಮೆಂಟ್ ಹಾಕಲು ಪ್ರೇರೇಪಿಸಿದೆ.
ಬೇರೆಯವರ ವಿಷಯದಲ್ಲಿ ನಾವು ಕೂಡ ಸಂಜಯರೇ ಎನ್ನುವುದು ನನ್ನ ಭಾವನೆ. ಆದರೆ ನಮ್ಮ ವಿಷಯ ಬಂದಾಗ ಮಾತ್ರ ಧೃತರಾಷ್ಟ್ರರಾಗಿ ಬಿಡುತ್ತೇವೆ. ನೀವು ಅಂದ ಹಾಗೆ ನಮ್ಮ ಜೀವನದಲ್ಲಿ ಸಂಜಯರೆಷ್ಟೋ? ಹಾಗೆಯೇ ಬೇರೆಯವರ ಜೀವನದಲ್ಲಿ ನಾವು ಕೂಡ ಸಂಜಯರಾಗಿ ಬಿಟ್ಟಿರುತ್ತೇವೆ. ಜೀವನವೇ ಒಂದು ಕಲಿಕೆಯಲ್ಲವೇ ? :)

Kanthi said...

nice writeup Nayanee.. :-) Nimma barahagalu kushikoduttive.