'ಅವನು ಬಂದು ಇನ್ನೂ ಮೂರು ಗಳಿಗೆಗಳಾಗಿವೆ ಅಷ್ಟೇ..... ' ಎಂದು ನನ್ನ ಸಖಿಯರೊಂದಿಗೆ ನಾನು ಇಲ್ಲಿ ಉಸುರುತ್ತಿರುವಾಗಲೇ, ನೀನು ಅಲ್ಲಿ ನಿನ್ನ ಸ್ನೇಹಿತರ ಸಮ್ಮುಖದಲ್ಲಿ ನಾನು ಬಂದು ಮೂರು ವರುಷವಾಯಿತು ಎಂದು ಹೇಳುತ್ತಾ ಮೂರು ಪದವನ್ನು ಮೂರು ರಹದಾರಿ ಉದ್ದಕ್ಕೆ ಎಳೆದು ನಿಟ್ಟುಸಿರಿಟ್ಟೆ ಎಂಬ ಸುದ್ದಿ ಬಂದಿದೆ.
'ನನ್ನ ಹೆಂಡತಿಯನ್ನು ನೀಚನೊಬ್ಬ ಹೊತ್ತುಕೊಂಡು ಹೋಗಿದ್ದಾನೆ, ದಯವಿಟ್ಟು ಸಹಾಯ ಮಾಡಿ.' ಎಂದು ಕರೆದವನ ಕರೆಗೆ ತಕ್ಷಣ ಹೊರಟು ನಿಂತೆ. ಎಷ್ಟಾದರೂ ನೀ ಬಯಸಿದ ಹುಡುಗಿಯಲ್ಲವೇ ಅವಳು. ಯುದ್ಧಕ್ಕೆ ಸನ್ನದ್ಧನಾಗಿರುವ ಗಂಡನನ್ನು ತಡೆಯುವ ರಾಣಿ ರಾಣಿಯೇ? ಆದರೆ ಯುದ್ಧದ ಕಾರಣವೇ ನನ್ನ ಎದೆಯಲ್ಲಿ ಮತ್ಸರದ ಬೆಂಕಿಯನ್ನು ಹೊತ್ತಿಸಿತ್ತು. ಆದರೂ, ಚರಿತ್ರೆಯ ಅನೇಕ ನತದೃಷ್ಟ ರಾಣಿಯರಂತೆ ಎದೆಯುರಿಯನ್ನು ನಿರ್ಲಿಪ್ತ ಮುಖಭಾವದಲ್ಲೂ, ರಾಣೀತನದ ಗಾಂಭೀರ್ಯದಲ್ಲೂ ಬಚ್ಚಿಟ್ಟು ದೂರದೇಶಕ್ಕೆ ನಿನ್ನನ್ನು ಕಳುಹಿಸಿಕೊಟ್ಟೆ. ನಾನು ಹೋಗಬೇಡ ಎಂದಿದ್ದರೂ ನೀನು ಹೋಗದೇ ಉಳಿಯುತ್ತಿರಲಿಲ್ಲ ಅನ್ನುವದೂ ನನಗೆ ಗೊತ್ತಿತ್ತು.
ಸೇವಕ ಸೇವಕಿಯರು, ಸುರಿದುಕೊಳ್ಳುವಷ್ಟು ಸುಖ, ಸೌಕರ್ಯ, ಸಾಮ್ರಾಜ್ಯ, ಆದರೆ ಸಖನಿಲ್ಲ ಎಂದು ಮನಸ್ಸು ಯಾವುದೋ ಮೂಲೆಯಲ್ಲಿ ಕೊರಗುತ್ತಿದ್ದರೂ, ಎಲ್ಲರೂ ಹಾಗೇ ಕೊರಗುತ್ತಾರೆ, ನಾನು ಹಾಗಲ್ಲ ಎಂದು ನನ್ನನ್ನೇ ನಂಬಿಸಿಕೊಂಡೆ. ದೃಢವಾಗಿ ನಿಂತೆ. ಮಳೆಗಾಲದ ಹನಿಗಳು ಅಕ್ಷತೆಯಂತೆ ಎರಚಾಡುತ್ತಿದ್ದರೆ, ನನ್ನೊಳಗೆ ಕಡಲ ಆವೇಗ. ಅದಕ್ಕೆ ಕಾಳ್ಗಿಚ್ಚಿನಂತೆ ಹಬ್ಬುವ ವಿರಹದುರಿ. ನೀನು ನನ್ನನ್ನು ಅಪ್ಪಿ ಮುದ್ದಿಸಿದ ಸುಖದ ಹೊದಿಕೆ ನನ್ನನ್ನು ಸಂತೈಸುತ್ತಿತ್ತು.
ಯುದ್ಧ ಮುಗಿಯಿತು ಎಂಬ ಸುದ್ದಿ ಅಲ್ಲೆಲ್ಲಿಂದಲೋ ಬಂತು. ಉಳಿದ ಚೂರುಪಾರು ಕೌಮಾರ್ಯವನ್ನೇ ದಿಂಬಿನ ಕೆಳಗಿಟ್ಟು ಗರಿಗರಿಯಾಗಿಸಿಕೊಂಡು ಅಣಿಯಾದೆ. ಕ್ಷಣಕ್ಷಣವೂ ಕಾದೆ. ಬಳಸದೆ ಹೋದ ಲೋಹಕ್ಕೆ ಬೇಗ ತುಕ್ಕು ಹಿಡಿಯುವುದಂತೆ. ಬಳಸದೇ ಹೋದ ದೇಹ?
ತಡವಾಗಿ ಬಂದವನಿಗೆ ಸಾವಿರ ಕಾರಣಗಳಿದ್ದವು. ಮುಗಿಯದ ಯುದ್ಧ, ತಪ್ಪಿಹೋದ ದಾರಿ, ಗೆದ್ದ ಸಂಭ್ರಮ. ಕೊನೆಗೂ ಬಂದೆ; ಕೋಪದೊಳಗೂ ಖುಷಿಯಿತ್ತು. ಬಂದವನಿಗೆ ತನ್ನ ಸಾಹಸಗಳನ್ನು ವರ್ಣಿಸುವ ಹುರುಪು. ನಮಗೆ ಕೇಳಿಸಿಕೊಳ್ಳಲೇ ಬೇಕಾದ ಉತ್ಸಾಹ. ಹತ್ತು ವರ್ಷ ಅಹೋರಾತ್ರಿ ಹೇಳಿದರೂ ಮುಗಿಯದಷ್ಟು ಕತೆಯಿತ್ತು. ಕೇಳಿ ನಮಗೆ ಬೇಸರ ಆಗಲಿಲ್ಲ. ಹೇಳಿ ನಿನಗೆ ಬೇಸರವಾಯ್ತು. ಮತ್ತೆ ಹೊರಟು ನಿಂತಿರುವೆ.
ನನ್ನಲ್ಲೂ ಕತೆಗಳಿವೆ. ನನ್ನ ಯೌವನದುದ್ದಕ್ಕೂ ಅವು ಚಾಚಿಕೊಂಡಿವೆ. ಸವರದೇ ಉಳಿದ ನನ್ನ ದೇಹದ ಒಂದೊಂದು ಸುಕ್ಕೂ ಸಾವಿರ ಕತೆ ಹೇಳೀತು. ನೀನು ಬಿಟ್ಟು ಹೋದದ್ದನ್ನು ಆಳಿದ ಕತೆ, ಕೊಟ್ಟು ಹೋದದ್ದನ್ನು ಬೆಳೆಸಿದ ಕತೆ, ಬಿಟ್ಟು ಹೋದವನ ನೆನಪಲ್ಲಿ ಬೆಂದ ಕತೆ, ಅವನಿಗಾಗಿ ಕಾದ ಕತೆ. ಸಾವಿರ ಆಮಿಷಗಳ ಎದುರು ಅವನವಳಾಗಿಯೇ ಉಳಿದ ಕತೆ.
ಕೇಳುವುದಕ್ಕೆ ನಿನಗೆ ಆಸಕ್ತಿಯಿಲ್ಲ. ಬಿಡುವಿಲ್ಲ. ಏಕಾಂತದಲ್ಲಿ ನಂಬಿಕೆಯಿಲ್ಲ. ನಾಯಕನಾದವನಿಗೆ ಜೊತೆಗೆ ಸಮೂಹ ಇರಬೇಕು. ಸಾಮೂಹಿಕವಾದದ್ದು ಪ್ರೀತಿ ಆಗಿರುವುದಿಲ್ಲ.
ವರ್ಷಗಳ ಕಾಲ ಹೋರಾಡಿ, ಹಲವಾರು ಅನುಭವಗಳನ್ನು ಮೈಗೂಡಿಸಿಕೊಂಡ ಮನಸ್ಸು ಜಡ್ಡುಗಟ್ಟಿರುತ್ತದೆ. ಅದಕ್ಕೇ ನಿನಗೆ ನನ್ನ ದೇಹದ ಸುಕ್ಕು ಮಾತ್ರ ಕಾಣಿಸಿತು.
ನನ್ನ ಯೌವನದಲ್ಲಿ ನೀನೆಲ್ಲಿದ್ದೆ?
-ಪೆನಲೋಪೆ

ಟಿಪ್ಪಣಿ- ಟೆನಿಸನ್ ಬರೆದ ಯೂಲಿಸಿಸ್ ಕವಿತೆ ಓದಿದ ತಕ್ಷಣ ಅನ್ನಿಸಿದ್ದು.
7 comments:
ee lEKana OdidmEle Alfred Lord Tennyson'na "Ulysses" odide..maja baMtu :)
keep rocking
ಬಹುಶಃ ಈಗ Tennyson ನ Ulysses ನ
Mr Ulysses ಅಂತ ಹಾಗೂ ನಿನ್ನ ಈ ಬರಹ ವನ್ನ Mrs Ulysses ಅಂತ ಕರಿಯ ಬಹುದು.
-Prasad
@Susheel
:-):-)
@Prasaad
:-0!!
ನನ್ನಲ್ಲೂ ಕತೆಗಳಿವೆ. ನನ್ನ ಯೌವನದುದ್ದಕ್ಕೂ ಅವು ಚಾಚಿಕೊಂಡಿವೆ. ಸವರದೇ ಉಳಿದ ನನ್ನ ದೇಹದ ಒಂದೊಂದು ಸುಕ್ಕೂ ಸಾವಿರ ಕತೆ ಹೇಳೀತು. ನೀನು ಬಿಟ್ಟು ಹೋದದ್ದನ್ನು ಆಳಿದ ಕತೆ, ಕೊಟ್ಟು ಹೋದದ್ದನ್ನು ಬೆಳೆಸಿದ ಕತೆ, ಬಿಟ್ಟು ಹೋದವನ ನೆನಪಲ್ಲಿ ಬೆಂದ ಕತೆ, ಅವನಿಗಾಗಿ ಕಾದ ಕತೆ. ಸಾವಿರ ಆಮಿಷಗಳ ಎದುರು ಅವನವಳಾಗಿಯೇ ಉಳಿದ ಕತೆ......
ಕೊನೇ ೧೦ ಸಾಲುಗಳಂತೂ ....... ಹ್ಮ್.. ಏನ್ ಹೇಳಲಿ . thanQ
ಸೇವಕ ಸೇವಕಿಯರು, ಸುರಿದುಕೊಳ್ಳುವಷ್ಟು ಸುಖ, ಸೌಕರ್ಯ, ಸಾಮ್ರಾಜ್ಯ, ಆದರೆ ಸಖನಿಲ್ಲ ಎಂದು ಮನಸ್ಸು ಯಾವುದೋ ಮೂಲೆಯಲ್ಲಿ ಕೊರಗುತ್ತಿದ್ದರೂ, ಎಲ್ಲರೂ ಹಾಗೇ ಕೊರಗುತ್ತಾರೆ, ನಾನು ಹಾಗಲ್ಲ ಎಂದು ನನ್ನನ್ನೇ ನಂಬಿಸಿಕೊಂಡೆ. ದೃಢವಾಗಿ ನಿಂತೆ. ಮಳೆಗಾಲದ ಹನಿಗಳು ಅಕ್ಷತೆಯಂತೆ ಎರಚಾಡುತ್ತಿದ್ದರೆ, ನನ್ನೊಳಗೆ ಕಡಲ ಆವೇಗ. ಅದಕ್ಕೆ ಕಾಳ್ಗಿಚ್ಚಿನಂತೆ ಹಬ್ಬುವ ವಿರಹದುರಿ. ನೀನು ನನ್ನನ್ನು ಅಪ್ಪಿ ಮುದ್ದಿಸಿದ ಸುಖದ ಹೊದಿಕೆ ನನ್ನನ್ನು ಸಂತೈಸುತ್ತಿತ್ತು.
ಯುದ್ಧ ಮುಗಿಯಿತು ಎಂಬ ಸುದ್ದಿ ಅಲ್ಲೆಲ್ಲಿಂದಲೋ ಬಂತು. ಉಳಿದ ಚೂರುಪಾರು ಕೌಮಾರ್ಯವನ್ನೇ ದಿಂಬಿನ ಕೆಳಗಿಟ್ಟು ಗರಿಗರಿಯಾಗಿಸಿಕೊಂಡು ಅಣಿಯಾದೆ. ಕ್ಷಣಕ್ಷಣವೂ ಕಾದೆ. ಬಳಸದೆ ಹೋದ ಲೋಹಕ್ಕೆ ಬೇಗ ತುಕ್ಕು ಹಿಡಿಯುವುದಂತೆ. ಬಳಸದೇ ಹೋದ ದೇಹ?
good construction of kannada language, very good

tumba ishta aaytu..ivattu ashtoo barahagalanna odide...
neevu enu baredru nange ishta aagatte annistu...
Post a Comment