Monday, February 16, 2009

ಲವ್ ಅಟ್ ಫಸ್ಟ್ ರೀಡ್..

Soft eyes ಶಿಶಿರನಿಗೆ,

ಲವ್ ಅಟ್ ಫಸ್ಟ್ ಸೈಟ್ ನಲ್ಲಿ ನಂಬಿಕೆಯಿದೆಯಾ ಅಂತ ನಿನ್ನಂಥವನನ್ನು ಕೇಳಿದರೆ ಅದಕ್ಕಿಂತ ಹುಚ್ಚುತನ ಬೇರೊಂದಿಲ್ಲ ಹುಡುಗಾ. ಅದರಲ್ಲೂ ಹಾಗೆ ನಿನ್ನ ಬಯಸಿ ಬಯಸಿ ಅರ್ಥ ಮಾಡಿಕೊಂಡ ನಾನಂತೂ ಅಂಥಾ ಎಡವಟ್ಟು ಪ್ರಶ್ನೆಯನ್ನ ಕೇಳಲೇ ಬಾರದು. ಆದರೆ ಲವ್ ಅಟ್ ಫಸ್ಟ್ ರೀಡ್ ನಲ್ಲಿ ನಂಬಿಕೆ ಇದೆಯೇನೋ ಅಂತ ಕೇಳಿದರೆ ನಗಬಹುದು ನೀನು. ಆದರೂ ನಂಬು ನನ್ನ.

ತೀರಾ ಹತ್ತಿರಾಗುವ ಮೊದಲೇ ನಾನೆಷ್ಟು ಜನರನ್ನು ದೂರ ಮಾಡಿಲ್ಲ. ಫೋನಿನಲ್ಲಿ ಮಾತಾಡುತ್ತಾ ಬುದ್ದಿವಂತನೆನಿಸುತ್ತಿದ್ದ ಕರೀ ಹುಡುಗನನ್ನು ಭೇಟಿಯಾದಾಗ ಎಲ್ಲದಕ್ಕೂ ನೀ ಹೇಳಿದಂತೆ ಅನ್ನತೊಡಗಿದಾಗ ಈ ಹುಡುಗ ಭೈರಪ್ಪನವರ ಸಾಕ್ಷಿಯ ಅಪ್ಪಾಜಪ್ಪನ ಥರದವನಿರಬಹುದು ಎನ್ನಿಸಿ, 'ಐ ಕಾಂಟ್ ಲವ್ ಯು' ಎಂದು ನನ್ನಿಂದ ಹೇಳಿಸಿಕೊಂಡವನಿಂದ ಹಿಡಿದು ಮೊನ್ನೆ ಮೊನ್ನೆ ಅವನಿಗೆ ಭಾವನೆಗಳೇ ಅರ್ಥ ಆಗಲ್ಲ ಸೆಲ್ಫ್ ಸೆಂಟರ್ಡ್ ಪರ್ಸನಾಲಿಟಿ, ತಾನು ಹೇಳಿದ್ದೇ ನೆಡೆಯಬೇಕೆನ್ನುವ ದಾಟು ಕಾದಂಬರಿಯ ವೆಂಕಟೇಶನ ಥರ, ಬುದ್ದಿವಂತ ಸರಿ ಆದರೆ ನನಗೆ ಹತ್ತಿರವಾಗಲಾರ ಎಂದು ಬಿಟ್ಟುಬಂದ ಹುಡುಗನವರೆಗೂ, ಅದೆಷ್ಟು ಜನ! ತುಂಬ ಮೊದ್ದ ಆಲನ ಹಳ್ಳಿಯವರ ಪರಸಂಗದ ಗೆಂಡೆ ತಿಮ್ಮನ ಥರ, ಇನ್ನೊಬ್ಬನ ಮಡಿ, ದೇವರು, ದಿಂಡರು, ಪೂಜೆ, ಪುನಸ್ಕಾರ, ಸಂಸ್ಕಾರದ ಪ್ರಾಣೆಷಾಚಾರ್ಯರ ರೀತಿ, ಚಾಕ್ಲೇಟ್ ಕಂಪನಿಯೊಂದರ ಸಿ. ಯಿ. ಓದು ಉದರಿಂಗ್ ಹೈಟ್ಸ್‌ನ ಹೀತ್ ಕ್ಲಿಫ್ ಥರಹದ ಪೈಶಾಚಿಕ ಪ್ರೀತಿಯ ನೆನಪು ತರಿಸಿದರೆ, ಇಷ್ಟವಾದ ಹುಡುಗನ ಅಲೌಕಿಕ ಆಸಕ್ತಿಯು ಮುಕ್ತದ ಸ್ವಾಮಿಜಿಯ ನೆನಪು ತರಿಸಿ ಹೆದರಿಸಿತ್ತು. ಇಂಗ್ಲಾಂಡಿನಿಂದ ಬಂದ ಹುಡುಗ ನೋಟದಲ್ಲಿ 'ದಿ ಕಂಪನಿ ಆಫ್ ವುಮೆನ್'ನ ಮೋಹನ್‌ನನ ಛಾಯೆ ಕಂಡು ಬೇಡವೆನಿಸಿ ಯಾವ ಹುಡುಗನೂ ಯಾವುದೇ ರೀತಿಯಲ್ಲೂ ನಿನ್ನ ಥರ ಅನ್ನಿಸದೆ ಹೊಂದಿಕೆಯಾಗಲಾರದೆ ಹೋದರು. 'ಮುಚ್ಚಿದ ಬಾಗಿಲ ಮುಂದೆ ಭಿಕ್ಷೆ ಬೇಡಿದರು'. ಹೋಗಲಿ ಪರವಾಗಿಲ್ಲ ಇವನು ಸರಿಯಾಗಬಹುದು ಪ್ರಪೋಸು ಮಾಡಲಾ ಅಂದುಕೊಳ್ಳುತ್ತಿರುವಾಗಲೇ ಕೆಲವರು ಅವರೇ ಪ್ರಪೋಸ್ ಮಾಡಿ ನನ್ನ ನಿರೀಕ್ಷೆಯನ್ನ ಹುಸಿ ಮಾಡಿದ್ದರು. ನದಿಯ ಕಾಲುಬುಡದೆಡೆಗೆ ತೆವಳಿಕೊಂಡು ಬರುವ ಸಮುದ್ರವನ್ನ ಪ್ರೀತಿಸುವುದಾದರೂ ಹೇಗೆ?'ಎಷ್ಟೇ ದೂರದಿಂದಲಾದರೂ ಸರಿ ಮಹಾನದಿ ತನ್ನೆಡೆಗೆ ಧುಮ್ಮಿಕ್ಕಿ ಹರಿದು ಬರಬೇಕೇ ಹೊರತು, ಸಮುದ್ರವೇ ತೆವಳಿಕೊಂಡು ನದಿಯ ಮನೆಬಾಗಿಲಿಗೆ ಹೋಗಲೊಲ್ಲದು.'ಈ ನಿನ್ನ ಮಾತುಗಳು ಪ್ರತಿಯೊಬ್ಬ ಹುಡುಗ ಬಂದು ಪ್ರಪೋಸ್ ಮಾಡಿದಾಗಲೂ ನೆನಪಾಗುತ್ತಿತ್ತೋ. ಇಲ್ಲಿಯವರೆಗೂ ಬರೋಬ್ಬರಿ ಹದಿನಾಲ್ಕು ಜನರನ್ನ ನಿನ್ನ ಕಾರಣದಿಂದಾಗಿ ರಿಜೆಕ್ಟ್ ಮಾಡಿದೀನಿ.

ಒಮ್ಮೆಯಾದರೂ ನಿನ್ನ ಕಷ್ಟಗಳನ್ನು ಹೇಳಿಕೊಳ್ಳುವುದಿಲ್ಲ ನೀನು, ಅವಡುಗಚ್ಚಿಕೊಂಡು ಎಂಥಾ ಪರಿಸ್ಥಿತಿಯಲ್ಲೂ ಸರಿಯಾಗಿ ಯೋಚಿಸುತ್ತೀಯ. ಹಾಗಿರಲು ಹೇಗೆ ಸಾಧ್ಯ ನಿಂಗೆ. ಯಾರ ಬಳಿಯಾದರೂ ನಿನ್ನ ಸಂಕಟಗಳನ್ನು ಹಂಚಿಕೊಳ್ಳಬೇಕು ಅನಿಸುತ್ತಿರಲಿಲ್ಲವೇನೋ? ನಿನ್ನ ಆತಂಕ ಸಂಕಟಗಳಿಗೆಲ್ಲಾ ಕಿವಿಯಾಗಬೇಕು ಅನ್ನಿಸುತ್ತಿತ್ತು ನನಗೆ. ಯಾರನ್ನಾದರೂ ಹಾಗೇ ಅವರಿರುವಂತೆಯೇ ಒಪ್ಪಿಕೊಳ್ಳುವುದನ್ನ, ಏನನ್ನಾದರೂ ಸಾಧಿಸಬೇಕಾದರೆ ರೂಢಿಸಿಕೊಳ್ಳಬೇಕಾದ ಧೃಡತೆಯನ್ನ ಸಂಕಲ್ಪವನ್ನ ಕಲಿಸಿಕೊಟ್ಟವನೇ ನೀನು. ನನ್ನ ವ್ಯಕ್ತಿತ್ವವದಲ್ಲಿ ನಿನ್ನ ಪ್ರಭಾವ ಎಷ್ಟಿದೆಯೆಂದು ಕಲ್ಪಿಸಿಕೊಳ್ಳಲೂ ಅಸಾಧ್ಯ ನಿನಗೆ. ನೀನೇ ಹೇಳಿದ ಮಾತು- ಸ್ಪರ್ಧೆಯಲ್ಲಿ ಪ್ರೀತಿ ಇರಬೇಕು. ಗೆದ್ದ ಗೆಲುವಿನಲ್ಲಿ ದುಷ್ಟ ಸಂತೋಷ ಇರಬಾರದು.

ಕೇಳು ಹುಡ್ಗಾ, 'ಮಹಾನದಿ ಸಮುದ್ರದೆಡೆಗೆ ಹರಿಯಬೇಕು, ಸಮುದ್ರ ನದಿಯೆಡೆಗೆ ತೆವಳಿಕೊಂಡು ಹೋಗಬಾರದು' ಎಲ್ಲಾ ಸರಿ. ಆದರೆ ನದಿ ಕೂಡಾ ಸಮುದ್ರವನ್ನ ನಿನ್ನೊಳಗೆ ಇಳಿಯಲಾ ಎಂದು ಕೇಳುವುದಿಲ್ಲ. ಸಮುದ್ರ ಬಾ ಅನ್ನುವುದೂ ಇಲ್ಲ ಆದರೆ ನದಿಯನ್ನ ತನ್ನೊಳಗೆ ಕರಗಿಸಿಕೊಳ್ಳಲು ಎಲ್ಲಾ ಸಿಧ್ದತೆ ಮಾಡಿಕೊಂಡು ಕಾಯುತ್ತದಲ್ಲಾ, ಹಾಗೆ ಅವನು ಅರಳಿಕೊಳ್ಳಬೇಕು, ನಾನು ಅವನೆಡೆಗೆ ಹರಿದ ಸದ್ದಿಗೆ ಅವನು ಮಯ್ಯೆಲ್ಲಾ ಕಿವಿಯಾಗಿಸಿಕೊಂಡು ಕಾಯಬೇಕು. ಹುಡುಗ ಮಾತ್ರ ಅಲ್ಲ ಹುಡುಗಿಯೂ ನಿನ್ನ ಪ್ರೀತಿಸುತ್ತೇನೆ ಎಂದು ಇಷ್ಟವಾದ ಹುಡುಗನ ಬಳಿ ಹೇಳಿಕೊಳ್ಳಬಾರದು.ಇಷ್ಟಕ್ಕೂ ಪ್ರೀತಿ ಹೇಳಿಕೊಳ್ಳುವುದಲ್ಲ. ಅರ್ಥ ಮಾಡಿಕೊಳ್ಳುವುದು. ನಾನು ನನ್ನ ವ್ಯಕ್ತಿತ್ವವನ್ನು ಮಡಿಚಿಟ್ಟು ಯಾರಿಗೂ ಶರಣಾಗತಳಾಗುವುದಿಲ್ಲ. .`ಯಾವ ಮನುಷ್ಯ ಯಾವ ಸ್ತರದಲ್ಲಿ ನಿಂತು ಯಾರನ್ನು ಪ್ರೀತಿಸಬಾರದು' ಅನ್ನೋದನ್ನು ತಿಳ್ಕೋಬೇಕು ಅಂದಿದ್ದೆ. ತಿಳ್ಕೊಂಡಿದ್ದೀನಿ ಅಂದ್ಕೊಂಡಿದ್ದೀನಿ. ಅರ್ಥ ಮಾಡಿಕೊಳ್ಳುತ್ತೀಯಾ ಹುಡುಗಾ? ಅರ್ಥ ಮಾಡಿಕೊಳ್ಳಲಾಗದಿದ್ದರೂ ನೀ ಹಿಂಗ ನನ್ನ ನೋಡಬ್ಯಾಡ ನನ್ನ.

(ರವಿ ಬೆಳೆಗೆರೆಯವರ ನೀ ಹಿಂಗ ನೋಡಬ್ಯಾಡ ನನ್ನ ಕಾದಂಬರಿಯ ನಾಯಕ ಶಿಶಿರ ಇಷ್ಟ ನಂಗೆ. ಅವನಿಗೆ ಬರೆದ ಪತ್ರ ಇದು, ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿತ್ತು)

14 comments:

Anonymous said...

dear mrugnayanee,
Absolutely a coincidence.
Even my fav boy is shishira.I wish i were a girl so that i would love him forever.
thanks for remembering my boyfriend to me.
-divakar
manvidivakar@gmail.com

Anonymous said...

dear mrugnayanee,
Absolutely a coincidence.
Even my fav boy is shishira.I wish i were a girl so that i would love him forever.
thanks for remembering my boyfriend to me.
-divakar
manvidivakar@gmail.com

Anonymous said...

nija, pustaka odida mele tumba dina naanoo MAHANADIya gungallidde.

One request: if you get the book "Nobody's son", please let me know the details from where did you get the book.

-Shadakshari

ಸಂದೀಪ್ ಕಾಮತ್ said...

ರೀ ಕೂದಲು ಬಾಚಿಕೊಂಡು ಫೋಟೋ ತೆಗೆಸಿರಿ .ಮುಖಕ್ಕೆ ಯಾಕೆ ಕೈ ಅಡ್ಡ ಇಡೋದು :X

Bigbuj said...

Odta iddare....Nanage anisutta irutte nane shishira agirbarda anth?????

Unknown said...

dear mrugnayanee,
Surprisingly, I am too in love with shishira.many a time i felt that, i would be a girl to love him. I liked the way he is presented himself.
Thanks
manvidivakar@gmail.com

mruganayanee said...

@Divaakar

:-0, atleast boys must learn to be like him

@Shadakshari

True... I havent read will try finding it and let you know

@Big Buj
hu hu try dear its not that hard...

ವಿ.ರಾ.ಹೆ. said...

ಯಾರನ್ನಾದರೂ ಹಾಗೇ ಅವರಿರುವಂತೆಯೇ ಒಪ್ಪಿಕೊಳ್ಳುವುದನ್ನ, ಕಲಿಸಿಕೊಟ್ಟವನೇ ನೀನು ಎಂದು ಹೇಳುತ್ತಾ ಒಬ್ಬ ಸೆಲ್ಫ್ ಸೆಂಟರ್ಡ್,ಒಬ್ಬ ಗೆಂಡೆ ತಿಮ್ಮ, ಒಬ್ಬ ಅಪ್ಪಾಜಪ್ಪ ಅಂತ ತಿರಸ್ಕರಿಸಿದ್ದು ಯಾಕೆ! ಅವರಿರುವಂತೆಯೇ ಒಪ್ಪಿಕೊಳ್ಳಲಾಗಲಿಲ್ಲವಾ? ಮತ್ತೆ ಕಲಿತದ್ದು ಏನನ್ನ ಶಿಶಿರನಿಂದ?!

Hema Powar said...

ಹಾಯ್ ನಯನೀ, ಚೆನ್ನಾಗಿದೆ ನಿನ್ನ ಪತ್ರ. >>>>ಯಾರನ್ನಾದರೂ ಹಾಗೇ ಅವರಿರುವಂತೆಯೇ ಒಪ್ಪಿಕೊಳ್ಳುವುದನ್ನ, ಏನನ್ನಾದರೂ ಸಾಧಿಸಬೇಕಾದರೆ ರೂಢಿಸಿಕೊಳ್ಳಬೇಕಾದ ಧೃಡತೆಯನ್ನ ಸಂಕಲ್ಪವನ್ನ ಕಲಿಸಿಕೊಟ್ಟವನೇ ನೀನು. ನನ್ನ ವ್ಯಕ್ತಿತ್ವವದಲ್ಲಿ ನಿನ್ನ ಪ್ರಭಾವ ಎಷ್ಟಿದೆಯೆಂದು ಕಲ್ಪಿಸಿಕೊಳ್ಳಲೂ ಅಸಾಧ್ಯ ನಿನಗೆ.>>>
ಒಬ್ಬ ಹುಡುಗನೊಂದಿಗೆ ಹೀಗನ್ನಿಸಿಬಿಟ್ಟರೆ ಎಷ್ಟು ಖುಷಿಯಲ್ವ? ನಿನ್ನ ಶಿಶಿರ ಬರೀ ರವಿಬೆಳಗೆರೆಯ ಕಾದಂಬರಿಲಿದಾನ ಅಥವಾ ನಿಜವಾಗ್ಲೂ ಇದಾನಾ? ಇದ್ರೆ, ಅದ್ರಲ್ಲೂ ಹೀಗಿದ್ರೆ ಯು ಆರ್ ವೆರಿ ಲಕ್ಕೀ ಗರ್ಲ್. :-)

mruganayanee said...

@ವಿಕಸ್
ಒಪ್ಪಿಕೊಳ್ಳುವುದಕ್ಕೂ ಪ್ರೀತಿಸುವುದಕ್ಕೂ ವೆತ್ಯಾಸವಿದೆ ಅನ್ನುವುದನ್ನೂ ಶಿಶಿರನೇ ಹೇಳಿಕೊಡಬೇಕಿಲ್ಲ.

@ಹೇಮಾ..
ಹ್ಮ್... ಸ್ಕಿಕ್ಕೂ ಸ್ಕಿಕ್ಕಲಾರದವನನ್ನು ಏನನ್ನುತ್ತಾರೆ ಅಂತ ಗೊತ್ತಾ ಹೇಮಾ? ಏನಲ್ಲದಿದ್ರೂ ಪ್ರೀತಿ ಬರೆದಷ್ಟು ಸುಲಭವಲ್ಲ ಅನ್ಸುತ್ತೆ.

Bigbuj said...

Preeti baredashtu sulabhalla antha gottide alla good:)..Preeti maduvadu bahal sulabha adre adannu ulisikollavadu/padevadu tumbane kasta ri..Yakandre preeti padibekadre bahala bekadavaranna yedarisbekagutte.. Avaga tane preetiyalliruva Maja..

Hema Powar said...

ಅವನಿಗೆ ಹೆಸರಿರೋಲ್ಲ ನಯನೀ. ಅವನು ಹೀಗೆ ನಮ್ಮ ಅನುಭವದಂತೆ, ಕಣ್ಣೀರಿನಂತೆ, ನಗುವಿನಂತೆ ಜೊತೆಯಲ್ಲಿರುತ್ತಾನೆ. ನನ್ನದು ಅನಿಸುತ್ತಿದ್ದ ಹಾಗೆ ದೂರವಾಗಿಬಿಡುತ್ತಾನೆ,ಸಿಕ್ಕ ಅಂದುಕೊಳ್ಳುವಷ್ಟರಲ್ಲಿ ಜಾರಿ ಹೋಗುತ್ತಾನೆ...

ಅನಿಕೇತನ ಸುನಿಲ್ said...

ಮೃಗನಯನೀ,
ಶಿಶಿರನನ್ನ ಆ ಪುಸ್ತಕದಲ್ಲಿ ನೋಡದೆ ನಿಮ್ಮ ಬರಹಕ್ಕೆ ಪ್ರತಿಕ್ರಿಯಿಸುತ್ತಿದೀನಿ ಕ್ಷಮಿಸಿ.
ಬರಹ ಚೆನ್ನಾಗಿದೆ ಆ ಹುಡುಗ ನಿಮ್ಮ ರುಜುತ್ವಕ್ಕೆ ಕರಗಬಹುದೇನೋ....
ನಿಮ್ಮ, ಹೇಮಾ ಹಾಗೂ bigbuj ಅವರ comments ಕೂಡ ಗಮನಿಸಿದ್ದೀನಿ.
ಪ್ರೀತಿ ಬರೆದಷ್ಟು ಸುಲಭವಲ್ಲ...ನಿಜ ಅನ್ನಿಸುತ್ತೆ.
ಅಷ್ಟೇ ಅಲ್ಲ ಪ್ರೀತಿಸೋದಕ್ಕೆ ಒಂದು ವಿಶಿಷ್ಟ ಮುಗ್ಧತೆ ಬೇಕೇ ಬೇಕು ಅದಿಲ್ಲದಿದ್ರೆ ನಿಜಾವದ ಪ್ರೀತಿ ಇರೋಲ್ಲ ಅಂತಾನೂ ಅನ್ನಿಸುತ್ತೆ...ಆದರೆ ಆ ಪ್ರೀತಿ ಪಡೆಯೋ ಮಾತು ಬಂದಾಗ ಮನುಷ್ಯ ಬೇರೆನೆ ಆಗಿರ್ಬೇಕೇನೋ...
ಮುಗ್ಧತೆಗಿಂತ tactful ಆಗಿರೋದು ಪ್ರೀತಿ ಪಡೆಯುವಲ್ಲಿ ಸಹಾಯಕವ?? god knows :)
ಹಾಗೇನೇ ಪ್ರೀತಿಸೋದಕ್ಕೂ ಪ್ರೀತಿ ಪದೆಯೋದಕ್ಕೂ ಸಂಭಂದವಿದ್ಯ? ಪ್ರೀತಿಸಿದವರನ್ನು ಪಡೆಯೋದೆ ಪ್ರೀತಿಸುವುದ? again god knows :)
ಇನ್ನೂ ಹೆಚ್ಚು ಹೆಚ್ಚು ಬರೀರಿ ನಯನಿ,
ಖುಷಿ ಕೊಡ್ತಿದೆ ನಿಮ್ಮ ಬರಹಗಳು.
ಅನಿಕೇತನ .

Anonymous said...

There is no essence in this writing. I mean, stuff!.
Mere usage of text merely generates gramatically correct sentences/paragraphs. I would say [i know u hate me for this], stop immitating the so-called established writers. Try converting your experience into writing, then you will be succussful. Sorry being rude, but thats my honest opinion - The Ocean