Sunday, August 31, 2008

ನಿನ್ನ ಕುರಿತುಉಕ್ಕಿ ಹರಿಯಲು
ತನಗೆ ಮಾತ್ರ ಸಾಧ್ಯ
ಎಂದು ಅಹಂಕಾರ ಪಡುವ
ನನ್ನ ನಲ್ಲ
ಸದಾ ಭೊರ್ಗರೆಯುವ ನದಿಯನ್ನು
ಹೆಣ್ಣೆಂದು ಕರೆದು
ಪ್ರೀತಿಸಿದಅವನ ಹಾದಿ ಕಾಯುವಾಗ
ಒಂದೊಂದು ಕ್ಷಣವೂ ಒಂದು
ಯುಗದಂತೆ ಅಂದುಕೊಳ್ಳುತ್ತಿರುವಾಗಲೇ
ಕೆಲವೇ ಕ್ಷಣಗಳ
ಭೇಟಿಗಾಗಿ ಯುಗಗಟ್ಟಲೆ ಕಾದ
ಶಬರಿಯ ನೆನಪಾಗಿ
ನಾಚಿಕೆಯಿಂದ ತಲೆ ತಗ್ಗಿಸಿದೆ..ಶಬರಿಯ ಸಂಯಮವಿಲ್ಲ
ಅಹಲ್ಯೆಯ ಆಸೆಗಳಿಲ್ಲ
ನನಗೆ
ಅವನ ಹಾದಿ ಕಾಯುವ
ಸುಖ ಸುಕ್ಕುಗಟ್ಟುತ್ತಿದೆ
ಕಾದ ಹಾದಿಯಲ್ಲಿ ಮಿಂಚಿದ ಕನಸುಗಳು
ಮತ್ತೆ ಕರೆಯುತ್ತಿವೆ
ತಿರುಗಿ ಹೋಗಲಾರದ
ನನ್ನ ಅಸಹಾಯಕತೆಗೆ
ಪಾತಿವ್ರತ್ಯದ ಹೊದಿಕೆ

13 comments:

Santhosh Ananthapura said...

ಕಥನ ಲೋಕದಿಂದ ಕಾವ್ಯ ಲೋಕಕ್ಕೆ ಬಂದಿರುವುದು ಸ್ವಾಗತಾರ್ಹ. ಹಾಗಂತ ಕಥಾ ಲೋಕವನ್ನು ಮರೆಯದಿರಿ. ಎರಡರಲ್ಲೂ ಸಾಧನೆ ಮಾಡಿ. ಅಂದ ಹಾಗೆ ಅವಧಿಯಲ್ಲಿ ಸಿರಿ ಜಾತ್ರೆ ಆರಂಭವಾಗಿರುವುದು ಸಂತಸದ ವಿಚಾರ. ಜಾತ್ರೆಯಲ್ಲಿ ಕಂಡು ಬರುವ ಎಲ್ಲವೂ ಅಲ್ಲಿರಲಿ, ಓದಲು, ಚಿಂತಿಸಲು ಸಾಕಷ್ಟು ಸರಕುಗಳನ್ನು ನೀಡುತ್ತೀರಿ ಎಂದು ನಂಬಿದ್ದೇನೆ.

mruganayanee said...

@ಸಂತೋಷ್ ಅನಂತಪುರ

ಖಂಡಿತ ಮರೆತಿಲ್ಲ. ಕಥೆ ಬರೆಯುವುದು ನನ್ನ ಹವ್ಯಾಸ ಮಾತ್ರವಲ್ಲ ನನ್ನ ಪ್ರೀತಿ ಅದು. ಕಥೆಗಳಿವೆ ಆದರೆ ಅವು ಪತ್ರಿಕೆಗಳಲ್ಲಿ ಪ್ರಕಟವಾದ ನಂತರ ಇಲ್ಲಿ ಪೋಸ್ಟ್ ಮಾಡ್ತೀನಿ. ಇಲ್ಲೇ ಮೊದಲು ಪೋಸ್ಟ್ ಮಾಡಿಬಿಟ್ರೆ ಪತ್ರಿಕೆಯವರು ದುಡ್ಡು ಕೊಡದಿದ್ದರೆ ಅಂತ ಭಯ:-)

ಹ್ಮ್ಮ್ಹ್ಹ್... ನಿಮ್ಮ ಪ್ರೋತ್ಸಾಹ ಕಾಳಜಿ ಹಾಗೂ ಎಚ್ಚರಿಕೆಗಳಿಗೆ ವಂದನೆಗಳು....

Anonymous said...

ಬಹು ಅರ್ಥಗಳನ್ನು ಹೊಮ್ಮಿಸುವ ಮೊದಲ ಚರಣ ಇಷ್ಟ ಆಯಿತು.
D.M.Sagar

ಹರೀಶ್ ಕೇರ said...

neelu !
- Harish Kera

ದಿವಂಗತ said...

ಕಥೆಗಿಂತ ಕಾವ್ಯ ಅದ್ಭುತವಾಗಿದೆ

yogesh said...

dis s yogesh
i always watching u
i m a new blogger
rajayogi.wordpress.com
pls go thru it

Unknown said...

ಸಣ್ಣ ಸಾಲುಗಳಲ್ಲಿ ದೊಡ್ಡದನ್ನು ಅವಿತಿಟ್ಟುಕೊಳ್ಳುವ ಕವಿತೆಗಳನ್ನು ಬರೆದಿದ್ದೀಯಾ ಪುಟ್ಟಾ, ಖುಷಿಯಾಯ್ತು. ಇವತ್ತಿಗೆ ಬೇಕಾಗಿರೋದು ಹೀಗಿರುವ ಕವನಗಳೇ. ತಕ್ಷಣ ಓದಿ ಕೆಲದಿನ ನೆನಪಿಟ್ಟುಕೊಂಡು ಸವಿಯುವುದಕ್ಕೆ ಇವು ಸಹಕಾರಿ.
ಮತ್ತೊಂದಷ್ಟು ಬರಿಯೇ.
-sathyaki meghavalli

mruganayanee said...

@all
ಧನ್ಯವಾದಗಳು.

@ಸಾತ್ಯಕಿ
ಎಂತದೋ ನೀನು. ನಿನ್ ಬ್ಲಾಗ್ ಓದಲ್ಲ ಬರ್ದು ನಂಗೆ ಓದಿ ಹೇಳು ಅಂತ ಡೈಲಾಗ್ ಹೊಡೀತಿದ್ದೆ. ಈಗ ನೋಡಿದ್ರೆ ಕಮೆಂಟು..... ಖುಶಿಯಾಯ್ತು:-)

ranjith said...

ತುಂಬಾ ಕಾಲ ಮನದಿ ಗುಂಯ್ ಗುಡುವ ಸಾಲುಗಳು..

ಧನ್ಯವಾದಗಳು ಮೇಡಂ..:)

ಸಂದೀಪ್ ಕಾಮತ್ said...
This comment has been removed by the author.
ಸಂದೀಪ್ ಕಾಮತ್ said...

ಏನ್ರಿ ಅವಧಿಯಲ್ಲಿ ಬರಹಕ್ಕಿಂತ ಫೋಟೊಗಳೆ ಜಾಸ್ತಿ ಆಗ್ತಾ ಇವೆ!
ಏನು ಫೋಟೊ ಬ್ಲಾಗ್ ಏನಾದ್ರೂ ಆರಂಭಿಸಿದ್ದೀರಾ?

PRANJALE said...

hey its good yar... anthoo kavanaanoo blognalli hakooke shoru madidiya.. avaththindane ankothidde ninyake kavanana blog nalli hakthilla antha...

ರಾಘು ತೆಳಗಡಿ said...

ಹೇಯ್ ಮೃಗನಯನೀ,,,,,
ಕಾಯುವದರಲ್ಲಿ ಅದೇನೋ ಒಂದು ಬಗೆಯ ಖುಷಿ ಅನ್ನೋ ತರಹದ ನಿಮ್ಮ ಕವನ ಇಷ್ಟ ಆಯಿತು.....ಆದ್ರೆ ಯಾರಿಗೆ ಕಾದದ್ದು.......ಯಾರು ಆ........ ಮತ್ತೆ ಮತ್ತೆ ಬರಿತಿರಿ.