Thursday, September 11, 2008

ಸಾವಿನ ಹುಟ್ಟು......

ಸಾವು ಹುಟ್ಟಿತು! ಹುಟ್ಟುತ್ತಲೇ ಅಳುವ ಮೂಲಕ ತನ್ನ ಹುಟ್ಟಿನ, ಜೀವದ ಮುಖವಾಡವನ್ನು ಧರಿಸಿತು. ಸಾವಿನ ಹುಟ್ಟಿಗೆ ಎಲ್ಲರೂ ಸಂಭ್ರಮಿಸಿದರು, ಸಿಹಿ ಹಂಚಿದರು. ಸಾವಿಗೆ ಇದು ತನ್ನ ಕಂಡಲ್ಲ ತನ್ನ ಮುಖವಾಡವನ್ನು ಕಂಡು ಪಡುತ್ತಿರುವ ಸಂಭ್ರಮವೆಂದು ತಿಳಿಯಿತು. ಅದಕ್ಕೆ ಜೀವದ ಮುಖವಾಡಕ್ಕೆ ಮತ್ತಷ್ಟು ಬಿಗಿಯಾಗಿ ಆತುಕೊಂಡಿತು. ಹಾಲು ಕುಡಿಯಿತು, ನಕ್ಕಿತು, ಅತ್ತಿತು ತನ್ನ ಎತ್ತಿ ಆಡಿಸುವವರಿಗೆ ಮೊಗದಷ್ಟು ಅಪ್ಪಿಕೊಂಡಿತು.


ಮೊದಲನೆ ಹುಟ್ಟುಹಬ್ಬವಂತೆ. ಚಿರಾಯುವಾಗು ಎಂದು ಹಿರಿಯರು ಹರಸಿದರು. ಮುಖವಾಡಕ್ಕಲ್ಲ ತನಗೇ ಹರಸಿದ್ದು ಎಂಬ ಅರಿವಿನಿಂದ ಸಾವು ಹಿರಿಹಿರಿ ಹಿಗ್ಗಿತು.


ತೊದಲು ನುಡಿಯಿತು, ಮಾತಾಯಿತು, ಸಾವು ಬೆಳೆಯಿತು. ಅಕ್ಷರ ಕಲಿಯಿತು, ಲೋಕವ ತಿಳಿದುಕೊಂಡೆ ಎಂದು ಮುಖವಾಡ ಬೀಗಿತು. ಅದೇ ಅಹಂಕಾರದಲ್ಲಿ ಏನೇನೋ ಮಾಡಿತು. ಕೂಡಿತು, ಕಳೆಯಿತು, ಅಳೆಯಿತು, ಸುರಿಯಿತು.


ಮುಖವಾಡಕ್ಕೆ ಮತ್ತೊಂದು ಮುಖವಾಡವನ್ನು ತಂದು ಕಟ್ಟಿದರು. ಮುಖವಾಡಗಳೆರಡೂ ಸೇರಿ ಮತ್ತೊಂದಷ್ಟು ಮುಖವಾಡಗಳಿಗೆ ಜನ್ಮ ನೀಡಿದವು.ಒಮ್ಮೆ ಗಹಗಹಿಸಿ ನಕ್ಕು ಮತ್ತೊಮ್ಮೆ ಬಿಕ್ಕಳಿಸಿ ಅತ್ತಿತು. ಒಮ್ಮೆ ರೋಷಾವೇಷದಿಂದ ಯಾರಮೇಲೋ ಏರಿಹೋಗಿ ಇನ್ನೊಮ್ಮೆ ಅಟ್ಟಿಸಿಕೊಂಡು ಬಂದವರಿಂದ ದೂರ ಓಡಿ ಬಳಲಿತು ಬಲಿಯಿತು.


ಮುಖವಾಡಕ್ಕೆ ತಾನು ಮುಖವಾಡವೆಂಬುತು ಮರತೇ ಹೋದಂತಿತ್ತು. ಮುಖವಾಡ ಕಳಚಿಕೊಂಡವರ ಕಂಡು ಮರುಗಿತು. ತಾನು ಶಾಶ್ವತವೆಂದುಕೊಂಡಿತು.

ಸಾವು ಹುಟ್ಟಿ ಬಹಳಷ್ಟು ವರ್ಷಗಳಾಯಿತು. ಯಾರಿಗೂ ಅದು ಮುಖವಾಡವೆಂದು ಗೊತ್ತಾಗಲೇ ಇಲ್ಲ. ಮುಖವಾಡವನ್ನೇ ನಿಜವೆಂದುಕೊಂಡು ಸುತ್ತ ಸಂಸಾರ ಹೂಡಿದರು, ಸುಖಿಸಿದರು. ತನ್ನ ಮುಖವಾಡದ ಪ್ರತಿಯೊಂದು ಕೃಯೆಗೂ ಎಲ್ಲರೂ ಅಷ್ಟು ಹರ್ಷಿಸುವುದು ನೋಡಿ ಸಾವಿಗೆ ಮುಖವಾಡದ ಮೇಲೆ ಹೊಟ್ಟೆಕಿಚ್ಚಾಯಿತು. ನಿಜವಾಗಿ ಇದೆಲ್ಲಾ ತನ್ನ ಹಕ್ಕು ಎಂದುಕೊಂಡಿತು. ಮುಖವಾಡವನ್ನು ಕಿತ್ತೊಗೆಯಿತು!

ಮುಖವಾಡವನ್ನು ಅದು ಕಿತ್ತೊಗೆದ ರಭಸಕ್ಕೆ, ಸುತ್ತಲಿನವರೆಲ್ಲಾ ಸ್ಥಬ್ಧರಾದರು. ಮೂಕರಾದರು.
ಮುಖವಾಡಕ್ಕೇ ಬೆಲೆಕೊಡುವ ಈ ಲೋಕವ ಕಂಡು ಸಾವು ಅಚ್ಚರಿಪಟ್ಟಿತು. ಮತ್ತೆಲ್ಲೊ ಮುಖವಾಡವನ್ನು ಧರಿಸಿ ಮತ್ತೆ ಹುಟ್ಟಿತು!!

9 comments:

ಬಾಲು said...

ಸಾವೇ ಹಾಗೆ, ಇಂದಲ್ಲ ನಾಳೆ ಸಾಯುತ್ತೇನೆಂದು ಗೊತ್ತಿದ್ದರು, ಅದನ್ನು ಮರೆತಂತೆ ಬದುಕುವುದು. ಅದು ಹುಟ್ಟು ಗುಣ, ನಾನು ಅಮರ ಅಂತ ಬಾವಿಸುತ್ತಾನೆ, ಹಳೆಯ ಕೋಟೆ ಕೊತ್ತಲ ಗಳು, ಶಿಲಾ ಶಾಸನಗಳು, ಎಲ್ಲದರಲ್ಲೂ ಅವನ ಹೆಸರೇ...... ಸತ್ತ ಮೇಲೆ ನನ್ನ ಹೆಸರಾದರು ಇರಲಿ ಎಂದು!!!
ನಮಗೆಲ್ಲರಿಗೂ ಸ್ವರ್ಗ ಬೇಕು, ಸಾವು ಬೇಡ... ಕೆಲವರು ಬದುಕಿದ್ದೂ ಸತ್ತಿರುತ್ತಾರೆ, ಕೆಲವರು ಸತ್ತಮೇಲು ಬದುಕುತ್ತಾರೆ. ಬಾಗಶಃ ಬದುಕೊಂಡೆ ಸತ್ಯವೋ... ಅಥವಾ ಸಾವು ಕೂಡ.

ನಿಮ್ಮ ಲೇಖನ ಚೆನ್ನಾಗಿದೆ.

ಶ್ರೀನಿಧಿ.ಡಿ.ಎಸ್ said...

nanna yavdo haLe baraha nenpaitu, nice one..

Shree said...

yerd sathi odide kene artha madkolakke thumba channagide matte savu annadakke ashtu kushi adre badkige innshtu?

ಕೆನೆ Coffee said...

ಸಾವಿನ ಹುಟ್ಟಿಗೆ ಎಲ್ಲರೂ ಸಂಭ್ರಮಿಸಿದರು...
ನಿಮ್ಮ ಬರಹ ಎರಡು ದಿನ ನನ್ನ ಕಾಡಿತು.

Anonymous said...

ಸಾವಿನ ಹುಟ್ಟಿಗೆ ಎಲ್ಲರೂ ಸಂಭ್ರಮಿಸಿದರು...
ನಿಮ್ಮ ಬರಹ ಎರಡು ದಿನ ನನ್ನ ಕಾಡಿತು.

Suma Udupa said...

Tumba chennagi de baraha!! Never thought like thisss...

-Suma.

Raghavendra Bhat said...

nalku varshdinda "smashana suddi" (crime reporting )madutta iddene. adare ninastu chandavagi savannu bannisalu sadyvaglilla. ninna bagge asuuye agootee--------- raghu bhat

Unknown said...

ಸುತ್ತಲಿನವರು ಅಚ್ಚರಿಪಟ್ಟರು ಅನ್ನೋದು ಸರಿ ಆದರು, ಅಲ್ಲಿಯೂ ಮುಖವಾಡಗಳಿದ್ದವು. ಒಂದು ಮುಖವಾಡ
ಇನ್ನೊಂದನ್ನು ನೋಡಿ ಅಚ್ಚರಿ ಪಡೋದು ಮಜಾ ಅನ್ನಿಸಲ್ವಾ? ಬಹುಷ್ಯ ಮುಖವಾಡದ ಕೆಲಸಾನೇ ಅದೇ ಇರಬೇಕು.
ಒಟ್ಟಾರೆ ಲೇಖನ ಖುಷಿ ತಂತು. ಧನ್ಯವಾದಗಳು.

Narasimha Vasista said...

Tumba chenaggide ,,, the imagniation,,, and a sort of defining death.... really wonderfull.......