ನಾನ್ಯಾವತ್ತೂ ಸಾವಿಗಾಗಿ ಕಾಯಲಿಲ್ಲ, ಸಾವು ‘ಹಾಗಿರತ್ತೆ, ಹೀಗಿರತ್ತೆ’ ಅಂತ ಕಲ್ಪಿಸಿಕೊಳ್ಳಲಿಲ್ಲ, ಭಯ ಪಡಲಿಲ್ಲ, ಉಲ್ಲಾಸಗೊಳ್ಳಲಿಲ್ಲ, ‘ಹೇಗೆ ಬರಬಹುದು?’ ಅಂತ ಯೋಚಿಸುತ್ತಾ ಕೂರಲಿಲ್ಲ.
ಸಾವಿನಿಂದ ತಪ್ಪಿಸಿಕೊಳ್ಳುವುದು ಅಷ್ಟು ಸುಲಭವಲ್ಲ, ಅವನ ಬರವನ್ನು ಆದಷ್ಟು ಮುಂದೆ ಹಾಕಲು ಪ್ರಯತ್ನಿಸಿದೆ, ಏನೇನೋ ನಾಟಕ ಆಡಿದೆ, ಬರುವವರು ಬರದೇ ಇರುತ್ತಾರೆಯೆ? ಬಂದೇ ಬಂದ. ನಾನವನಿಗೆ ಕಾಯುತ್ತಿರಲ್ಲಿಲ್ಲ ಎಂದು ತಿಳಿದಿತ್ತೇನೋ ಎನ್ನುವಂತೆ ಹುಡುಕಿಕೊಂಡು ನನಗಾಗಿಯೇ ಬಂದ, ನನ್ನ ಹೊತ್ತೊಯ್ಯುವುದಕ್ಕೆ.
ಖುಶಿಯಾಗಿಯೇ ಇದ್ದವನು ಇದ್ದಕ್ಕಿದ್ದಂತೆ ಕೋಪಿಸಿಕೊಂಡವನಂತೆ ಒಬ್ಬನೇ ಹೊರಟು ನಿಂತ, ಯಾರೋ ಕಾಶಿಗೆ ಅಂದರು. ಖುಶಿಯಾಯಿತು ನನಗೆ. ಆದರೆ ಅಪ್ಪನೇ ಅವನ ಬಳಿ ಹೋಗಿ ರಮಿಸಿ ಕಾಲು ತೊಳೆದು ಮತ್ತೆ ಕರೆತಂದರು. ಆಮೇಲೆ ತಿಳಿಯಿತು ಅದೆಲ್ಲಾ ಸುಮ್ಮನೆಯಂತೆ ನಾಟಕವಂತೆ, ಆಟವಂತೆ. ‘ಸಾಯೋಆಟ’ದಲ್ಲಿ ಇನ್ನ್ಯಾವ ಆಟ? ಇನ್ನ್ಯಾಕೆ ಆಟ? ಯೋಚಿಸಿದೆ.
ನನಗೆ ಪುನರ್ಜನ್ಮದಲ್ಲಿ ನಂಬಿಕೆಯಿರಲಿಲ್ಲ. ರುಗ್ಣಶಯ್ಯೆಯಲ್ಲಿ ಮಲಗಿಸಿಕೊಂಡು ಇದು ಸಾವಲ್ಲ ಹೊಸ ಜನ್ಮ ಅಂತ ನಂಬಿಕೆ ಹುಟ್ಟಿಸಲು ಪ್ರಯತ್ನಿಸಿದ. ಎಲ್ಲಿಗೋ ಹೊರಟು ನಿಂತೆವು. ಎಲ್ಲಿಗೆ ಎಂದು ನಾನು ಕೇಳಲಿಲ್ಲ. ಪ್ರಶ್ನೆಗಳು ಆವಿಯಾಗಿ ಹೋಗಿದ್ದವು. ಉತ್ತರಗಳು ಯಾವ ವ್ಯತ್ಯಾಸವನ್ನೂ ಸೃಷ್ಟಿಸುತ್ತಿರಲಿಲ್ಲ. ಅಪ್ಪ ಅಮ್ಮ ಎಲ್ಲರೂ ಅಳುತ್ತಿದ್ದರು. ನನಗೆ ಗೊತ್ತಾಗುತ್ತಿತ್ತು "ಪುತ್ರ ಶೋಕಂ ನಿರಂತರಂ". ಮನೆಯವರಿಗೆಲ್ಲಾ ಸೂತಕ.
ಸಾವಿನ ಮನೆಯಲ್ಲಿ ನಿಶ್ಚಲ ನಿದ್ದೆ . Grave is a fine safe place but none do there embrace ಅಂದಿದ್ದ ಕವಿಮಾತು ಸುಳ್ಳಾಗಿದ್ದು ಯೋಚಿಸಿ ನಕ್ಕೆ. ನಾನು ನಕ್ಕಿದ್ದು ಇನ್ನೇನೋ ಅರ್ಥ ಕೊಟ್ಟಿರಬೇಕು ಸಾವಿನ ನಂತರದ ಯೋಚನೆಗಳೂ ‘ಬಾಹುಬಂಧನ ಚುಂಬನ’.
ಈಗೆಲ್ಲಾ ಬದಲಾಗಿ ಹೋಗಿದೆ. ಇಂಥ ಸಾವಿನಿಂದಾಗುವ ಮತ್ತೊಂದು ಹುಟ್ಟಿನ ಬಗ್ಗೆ ಅದು ಹುಟ್ಟಿದ ಕ್ಷಣದಿಂದ ಸಾವಿಗೆ ವಿವಿಧ ರೀತಿಯಲ್ಲಿ ತಯಾರಾಗುವುದರ ಬಗ್ಗೆ ಆಶ್ಚರ್ಯ ಪಡುತ್ತೇನೆ.ನಿಧಾನಕ್ಕೆ ಈ ಬದುಕು ಇಷ್ಟವಾಗುತ್ತಿದೆ. ಬದುಕು ಎಂದಾಕ್ಷಣ ಸಾವು ಆತ್ಮಹತ್ಯೆ ಮಾಡಿಕೊಂಡಿದೆ. ಈಗೆಲ್ಲಾ ಅಯೋಮಯ ‘ಹುಟ್ಟಿನಿಂದ ಸಾವಿನೆಡೆಗೆ’ ಎಂಬುದು ಸುಳ್ಳಾಗಿ, ಸಾವಿಗೆ ತಯಾರಾಗುತ್ತಿರುವ ಹೊಸಹುಟ್ಟು ನನ್ನಲ್ಲಿ ಜೀವ ಕಳೆ ತುಂಬಿದೆ. ಹುಟ್ಟುಸಾವುಗಳ ವಿಷಯಕ್ಕೇ ಹೋಗದೆ ನಿರಾತಂಕವಾಗಿದೆ. ನನ್ನ ಪ್ರತಿ ಕ್ಷಣವೂ ಜೀವಂತವಾಗಿಸುತ್ತಿದೆ. ಸಾವೆಂದುಕೊಂಡವನು ಪ್ರೀತಿಯಿಂದ ಜೀವಹಿಂಡುತ್ತಾನೆ.
ನನಗೀಗ ಪುನರ್ಜನ್ಮದಲ್ಲಿ ನಂಬಿಕೆ ಇದೆ.
ಮೂರು ಡಬ್ಬಿಗಳು ಮತ್ತು...
3 weeks ago
11 comments:
ನಿಮ್ಮ ಬರಹ ತುಂಬಾ ಕ್ಲಿಷ್ಟವಾಗಿದೆ ...ಒಮ್ಮೆ ಓದಿದರೆ ಏನು ಅಂತ ಗೊತ್ತಾಗುವುದೇ ಇಲ್ಲ ...ನೀವು ಸಾವನ್ನ ಇಲ್ಲಿ ಯಾವ್ದಕ್ಕೆ ಹೋಲಿಕೆ ಮಾಡಿರುವಿರಿ ಅಂತ ನನಗೆ ಗೊತಾಗ್ತಿಲ್ಲ....ಅದು ನಿಮ್ಮ ಪ್ರೀತಿನ ????
hmm.. nijakku savondhu vismaya...
nijakku savondhu vismaya... punarjanma, nireekshe..
savu sathya...
nice article.
@ನನ್ನ ಮನದ ಭಾವಕೆ ಕನ್ನಡಿ ಹಿಡಿದಾಗ
ಮದುವೆಯನ್ನ ಅಥವಾ ಮದುಮಗನನ್ನ ಸಾವಿಗೆ, ಸಾವಿಗೆ ಮುನ್ನ ಆಗುವ ಅನುಭವಗಳಿಗೆ ಸಾವಿನ ನಂತರದ ಅನುಭೂತಿಗಳಿಗೆ ಹೋಲಿಸಲು ಹೊರಟು ಕೊನೆಗೆ ಸೋತುಹೋಗಿದ್ದೇನೆ
ಕಷ್ಟ ಕೊಟ್ಟಿದ್ದಕ್ಕೆ ಕ್ಷಮೆ ಇರಲಿ :-)
ಧನ್ಯವಾದಗಳು
@ಮಹೇಶ್
thank you, ಸಾವಿನ ಬಗ್ಗೆ ಮಾತಾಡೋಕ್ಕೆ ಭಯ ನಂಗೆ
ಇನ್ನೂ ಏನಾದ್ರೂ ನನಗೇ ಅರ್ಥ ಆಗ್ದಿದ್ದು ಬರ್ದು ಬಿಡ್ತಿನಾ ಅಂತ.
ಹು ಹು :-)
Saavu Nishcitha.... Hutuu Aakasmika.. antha gaade ideyallave.
ನೀವು ಹೇಳಬೇಕಾದ ವಿಷಯವನ್ನು ಹೇಳುವಲ್ಲಿ ವಿಫಲವಾಗಿದ್ದೀರಿ ಅನ್ನೋದು ...ನಿಮ್ಮ ತಪ್ಪು ಕಲ್ಪನೆ....
ನಿಮ್ಮ ಮಾರು ಸ್ಪಷ್ಟವಾಗಿ ಹಾಗೂ ಸುಂದರವಾಗಿ ವ್ಯಕ್ತವಾಗಿದೆ...
melnotakke artha agadidru, suptha manasina aladalli ellrigu thilidhidhe savondhu sathya antha... adru adhanna manasu yako oppolla... adakke baya shuruvagodhu...
heege baritha iri...
ತುಂಬಾ ಚೆನ್ನಾಗಿದೆ ಬರಹ. Good holding :-)
ನೀನು ಸೋತಿಲ್ಲ, ಗಮನ ಕೊಟ್ಟು ಓದಿದರೆ ಅದು ಮದುವೆಯ ಕುರಿತಾದದ್ದು ಅನ್ನೋದು ಸ್ಪಷ್ಟವಾಗಿ ತಿಳಿಯುತ್ತೆ.
ಅದೇ ರೀತಿ 'ಪ್ರೀತಿಯಿಂದ ಜೀವ ಹಿಂಡುವ೦ತವನೆ ಸಿಗಲಿ ಅಂತ ಹಾರೈಸ್ತೀನಿ.
ತುಂಬಾ ಚೆನ್ನಾಗಿದೆ ಬರಹ.Good holoding:-)
ನೀನು ಸೋತಿಲ್ಲ, ಗಮನ ಕೊಟ್ಟು ಓದಿದರೆ ಅದು ಮದುವೆಯ ಕುರಿತಾದದ್ದು ಅನ್ನೋದು ಸ್ಪಷ್ಟವಾಗಿ ತಿಳಿಯುತ್ತೆ. ಅದೇ ರೀತಿ 'ಪ್ರೀತಿಯಿಂದ ಜೀವ ಹಿಂಡುವ೦ತವನೆ ಸಿಗಲಿ ಅಂತ ಹಾರೈಸ್ತೀನಿ..
"ಬದುಕು ಎಂದಾಕ್ಷಣ ಸಾವು ಆತ್ಮಹತ್ಯೆ ಮಾಡಿಕೊಂಡಿದೆ"
--ಸೂಪರ್ಬ್!
ಎಷ್ಟ್ ಚೆನ್ನಾಗಿ ಬರ್ದಿದೀರ್ರೀ.. ಎಷ್ಟ್ ಚನ್ಗಾಗೀ೦ದ್ರೆ ಮದುವೆ ಬಗ್ಗೇ೦ತ ಗೊತ್ತಾಗ್ಲೇ ಇಲ್ಲ .. :D ಅದು ಅಲ್ಲಿಗೇ ಸೀಮಿತ ಆಗ್ಲೂ ಬೇಕಿಲ್ಲ ಬಿಡಿ.. :)
(betw, che! nimma marriage aaglE fixeda?! :( )
Post a Comment