Saturday, September 4, 2010

ಪಂಚರಂಗಿ ನೋಡಿದೆ...

ಥೇಟ್ ಕಾಯ್ಕಿಣಿ ಸ್ಟೈಲಿನ ಶುರು ಎಲ್ಲಿ ಕೊನೆ ಯಾವುದು ಎಂದು ಗೊತ್ತಾಗದ ಕಥೆಗಳು, ಎಡಿಟಿಂಗ್ ಟೇಬಲ್ಲಿನಲ್ಲಿ ಕೂತು ಮಾಡಿದಂಥಾ ಸ್ಕ್ರೀನ್ ಪ್ಲೇಗಳು, ಗಣೇಶ್ ಬಾಯಲ್ಲಿ ಹೇಳಿಸಿದ್ರೆ ಬರೀ ಬೋರು ಹೊಡೆಸುವಂಥ ಹಳೇ ಕಾಮಿಡಿ ಅನಿಸುತ್ತಿದ್ದ, ಆದರೆ ದಿಗಂತ್ ಬಾಯಲ್ಲಿ ಕಾಮಿಡಿಯೂ ಪನ್ನೂ ಅನ್ನಿಸುವ ಸೂಪರ್ ಡೈಲಾಗ್ ಗಳು,ಇಷ್ಟವಾಗುವ ಸರ್ಕಾಸ್ಟಿಕ್ ಹಾಡುಗಳು,ಜೀರ್ಣಿಸಿಕೊಳ್ಳಲಾಗದ ಸತ್ಯಗಳು,ನೈಜವೆನಿಸುವ ದಿಗಂತ್ ಆಕ್ಟಿಂಗಳು,ಎಂದಿನಂತೆ ಇಶ್ಟವಾಗುವ ಅನಂತ್ ನಾಗ್, ಸುಧಾ ಬೆಳವಾಡಿ ಇನ್ನಿತರುಗಳು, ಮರ ಸುತ್ತುವ ಕಾರ್ಯಕ್ರಮವಿಲ್ಲದೆ, ಮರ ಹತ್ತಿಸಿ, ತೀರಾ ಬೋರು ಹೊಡಿಸದೆ ಡಿಫರೆಂಟಾಗಿ ಪ್ರೀತಿ, ಮದುವೆ ಮಾಡಿಸಿದ ರೀತಿಗಳು, ಥಟ್ಟನೆ ಅರ್ಥವಾಗಿಬಿಡುವ ’ಗಿಜಿಬಿಜಿ ಆ ಆ ಆ,ಗಿರಿಗಿರಿ ಕಯ ಕಯ ಕೊ ಕೊ ಕೊ,ಲಬೊ ಲಬೋ’ಗಳು, ಹಾಡಿಗಷ್ಟೇ ಸೀಮಿತವಾಗಿದ್ದರೆ ಚನ್ನಾಗಿರುತ್ತಿದ್ದ ಕಾಯ್ಕಿಣಿ ಎಂಟ್ರೆನ್ಸ್ ಗಳು, ಹೆಚ್ಚಾಗೇ ಮೂಗು ತೂರಿಸುವ ಯೋಗ್ರಾಜ್ ಭಟ್ ಸೌಂಡುಗಳು, ಮಾಸಿಗೂ ಪಿವಿಆರ್ ಜನಕ್ಕೂ ಕೇಟರ್ ಮಾಡುವ ಸ್ಕ್ರೀನ್ ಪ್ಲೇಗಳು, ಹೇಳಿಸಿಕೊಳ್ಳುವ ಕಥೆ ಇಲ್ಲದಿದ್ದರೂ ಎರಡೂವರೆ ಗಂಟೆಕಾಲ ಎಂಟರ್ಟೈನ್ ಮಾಡಿ ಚಂದದ ಮೆಸೇಜು ರವಾನೆ ಮಾಡುವ ಯೋಗ್ರಾಜ್ ಭಟ್ಟರ ನಿರ್ದೇಶನಗಳು, ಅವರ ಚಂದದ ಸಿನಿಮಾಗಳು, ನೋಡಿಬಂದ ನಾವುಗಳು ನೋಡಿಬರಬಹುದಾದ ನೀವುಗಳು. ಮತ್ತೆ ಎಂದಿನ ಹಾಗೆ ಜೀವನ ನಡೆಸುವ ಎಲ್ಲರುಗಳು.

10 comments:

ಹಳ್ಳಿ ಹುಡುಗ ತರುಣ್ said...

thanks for ur revive comments... nanu nodana anta plan ide let see time adre today or tomorrow.

balasubramanya said...

ಪಂಚರಂಗಿ ಕತೆನ ಹೀಗೆ ಜಾಲಾಡಿದ್ದೀರಿ!!! ಅಲ್ರೀ ನೀವು ಹೇಳೋಹಾಗೆ ಈ ಸಿನಿಮ ದ ಲೈಫು ಇಷ್ಟೇನೆ ??? ಏನೇ ಆಗ್ಲಿ ನಿಮ್ಮ ಕಾಮೆಂಟ್ ನಿಂದ ಒಮ್ಮೆ ನಾನು ವಿಮರ್ಶೆಗಾದರೂ ಈ ಚಿತ್ರ ನೋಡ್ತೇನೆ.

Keshav.Kulkarni said...

ಚೆನ್ನಾಗಿದೆ!

ದುರಹಂಕಾರಿ said...

ಮಜವಾಗಿದೆ. ಭಟ್ರ 'ಗಳು' ಪದ್ಯದ ರೀತಿಯಲ್ಲಿ...

paapu paapa said...

enree tumbaa samayada nantara nimma baraha odbekaadre panch rangi barbekaaytu nodi!

Pramod P T said...

ವಿಮರ್ಶೆಗೆ ಥ್ಯಾಂಕ್ಸುಗಳು :)

Prasad Shetty said...

ಬಹಳ ದಿನಗಳ ನಂತರ ನಿಮ್ಮ ಬ್ಲಾಗನಲ್ಲಿ ಲೇಖನ ನೋಡಿ ಖುಶಿಯಾಯಿತು... ನಿಮ್ಮ ಕತೆಗಳ ಒಂದು ಪುಸ್ತಕವೇ ಮಾಡಿಟ್ಟಿದ್ದೆ. ಈಗಿನ ಕೇಲವು ಕತೆಗಳನ್ನು ಇನ್ನು ಒದಿಲ್ಲ, ಮದ್ಯೆ ಸ್ವಲ್ಪ ದಿನ ನಿಮ್ಮ ಬ್ಲಾಗ್ ಕಡೆ ಬರುವುದು ಕಮ್ಮಿ ಆಗಿತ್ತು,.. ಹೀಗೆ ಬರಿತಾ ಇರಿ..

Shivakumara said...

ಪಂಚರಂಗಿ - ಡೈಲಾಗುಗಳು,ಹಾಡುಗಳು, ಸುಂದರ ಹೊರಾಂಗಣಗಳು, ಸಮುದ್ರಗಳು -ಸಿನೆಮಾ ಇಷ್ಟೇನೇ!

http://www.vismayanagari.com/node/7194

balu said...

sorry chennagills , cineam is visual base/medium not dialague base pl bhat u r disappointed about poor production quqlities sringe budget and mathu mathu mathu pl do come out from mungaru male and dialague hang over pls thanks-balu

PrAKoPa said...

eno madam,

nanage pancharangi ashtu like aagalilla.
adakke nanna review intide,
Free maadikondu odi

www.prakopa.blogspot.com