Friday, July 18, 2008

ನಿನ್ನ ಚಾರ್ಲೀ ಸೆಂಟೂ ಅವನ ಪಿಜ್ಜಾ ಬರ್ಗರ್ರೂ


ನಿನ್ನ ಪತ್ರ ಓದಿದೆ. ಹುಡುಗ ಇಷ್ಟ ಆಯ್ತು ಬಹಳ ಗಂಭೀರವಾಗಿ, ಚೊಕ್ಕವಾಗಿ ನಿಂಗೇನನ್ನಿಸುತ್ತೋ ಅದನ್ನು ಹೇಳಿದ್ದೀಯ. ಈಗಿನ ಕನ್ನಡ ಸಾಹಿತ್ಯದ ಬಗ್ಗೆ ನೀನು ಇಷ್ಟೆಲ್ಲಾ ತಲೆಕೆಡಿಸಿಕೊಂಡಿದ್ದೀಯ ಅಂತ ಗೊತ್ತಾದಾಗ ಸುಮ್ಮನೆ ಖುಷಿಯಾಯಿತು. It was witty and sarcastic.

ಮೊದಲು ನಾನು ನಿಂಗೆ ಕೊಟ್ಟ ಪುಸ್ತಕದ ಬಗ್ಗೆ ಮಾತಾಡೋಣ. ನಾನು ನಿಂಗೆ ಆ ಪುಸ್ತಕ ಕೊಡುವಾಗ ಹೇಳಿದ್ದು ‘ಚೆನ್ನಾಗಿದೆ ಓದು’ ಅಂತಲ್ಲ. ನಂಗೆ ಇಷ್ಟ ಆಯ್ತು ಓದು ಅಂತ. ಈಗ ಚೆನ್ನಾಗಿದೆ ಅಥವ ಚೆನ್ನಾಗಿಲ್ಲ ಅನ್ನೋದಿದೆಯಲ್ಲ it's a generalised comment. ಇಂಥ ಕಾಮೆಂಟುಗಳು ನನಗೆ ಅರ್ಥ ಆಗಲ್ಲ. ನನಗೆ ಗೊತ್ತಾಗೋದು “ನಂಗೆ ಇಷ್ಟ ಆಯ್ತು" ಅಥವ ‘ಇಷ್ಟ ಆಗ್ಲಿಲ್ಲ’ ಅನ್ನೋದು. ಚೆನ್ನಾಗಿದೆ ಅಥವ ಚೆನ್ನಾಗಿಲ್ಲ ಒಳ್ಳೆಯವನು ಅಥವ ಕೆಟ್ಟವನು ಅನ್ನೋದು ಎಷ್ಟೊಂದು ಸಾಪೇಕ್ಷವಾದದ್ದು ಅಲ್ಲವೆ? ಕೆಲವರಿಗೆ ಇಷ್ಟವಾದದ್ದು ಇನ್ನು ಕೆಲವರಿಗೆ ಇಷ್ಟವಾಗದೆ ಇರಬಹುದು. ಕೆಲವರಿಗೆ ಒಳ್ಳೆಯವನು ಅನಿಸಿದ್ದವನು ಇನ್ನೊಬ್ಬರಿಗೆ ಕೆಟ್ಟವನಾಗಿರಬಹುದು.

ವಿಷಯಕ್ಕೆ ಬರೋಣ. ನಾ ಕೊಟ್ಟ ಪುಸ್ತಕವಿದೆಯಲ್ಲ ಅದು ನಾನು ಹುಟ್ಟಿ ಬೆಳೆದ ಪರಿಸರಕ್ಕಿಂತ ಬಹಳ ಭಿನ್ನವಾದ ಬೇರೆಯದೇ ಆದ ಪರಿಸರದಲ್ಲಿ ನಡೆಯುತ್ತೆ. ಎಲ್ಲೆಲ್ಲೂ ನಡೆಯುವುದು ಅಂಥದೇ ಕಥೆಗಳು. ಅದನ್ನು ಹೇಳುವ ರೀತಿ, ಅದು ನಡೆಯುವ ಪರಿಸರ, ಅದು ನಡೆದ ಕಾಲಘಟ್ಟ ಪ್ರತಿಯೊಂದು ಕಾಲಘಟ್ಟದಲ್ಲೂ ಅಂಥ ಘಟನೆಗಳಿಗೆ ಅನುಭವಗಳಿಗೆ ಜನ ಹೇಗೆ ಸ್ಪಂದಿಸುತ್ತಿದ್ದರು ಎಂಬುದು ಮುಖ್ಯ ಆಗತ್ತೆ. ಅವರು ಬರೆದಿದ್ದು ಮೂವತ್ತು ವರ್ಷದ ಹಿಂದೆ ನಡೆದಿರಬಹುದಾದ ಕಥೆಯನ್ನು. ಅಲ್ಲಿ ಪರಿಸ್ಥಿತಿಗಳು ಆಗ ಹೇಗಿದ್ದವು ಎಂಬುದನ್ನು. ಅವರು ಎಷ್ಟು ಸಹಜವಾಗಿ ಬಿಂಬಿಸುತ್ತಾರೆಂದರೆ ಸುಮ್ಮನೆ ಇಷ್ಟ ಆಗುತ್ತಾ ಹೋಯಿತು. ಹೊಸದೇನಿದೆ ಅಂದೆಯಲ್ಲ ಹುಡುಗ, ಹೊಸತು ಪದವನ್ನು ಹೇಗೆ ಡಿಫೈನ್ ಮಾಡ್ತಿಯ ನೀನು? ನನಗೆ ಆ ಲೇಖಕರು ತೋರಿಸಿದ ಜಗತ್ತಿದೆಯಲ್ಲ ತುಂಬ ಹೊಸತದು.
ಆ ಕಾದಂಬರಿಯ ಮೂಲಕ ಅದೇ ಜಾಗದ ಬಗ್ಗೆ ಜ್ಞಾನಪೀಠಿಯೊಬ್ಬರು ಬರೆಯುತ್ತಿದ್ದಾಗ ಇದ್ದ ಪರಿಸರಕ್ಕೂ ಇವರು ಬರೆದು ಕೈಗಿತ್ತಾಗ ನಾನು ಕಂಡ ಪರಿಸರಕ್ಕೂ ಎಷ್ಟೊಂದು ವ್ಯತ್ಯಾಸವಾಗಿದೆ ಅನಿಸಿತು ಗೊತ್ತಾ? ನಾವು ಈಗ ಹೋಗಿ ನೋಡಿದರೆ ನಮಗೆ ಅಲ್ಲಿ ಇನ್ಯಾವುದೋ ಪರಿಸರ ಕಾಣಿಸೀತು. ಬದಲಾದ ಕಾಲಘಟ್ಟಗಳಲ್ಲಿ ಅಲ್ಲಿನ ಸಮಾಜ ಪರಿಸರ ಹೇಗಿದ್ದವು ಎಂಬುದು ಹೀಗೇ ದಾಖಲಾಗಬೇಕು. ಅಲ್ವಾ

ಅಂಕಣಕಾರರೊಬ್ಬರು ಅಡಿಗರು ಹೀಗಂದರು ಬೇಂದ್ರೆ ಹಾಗಂದರು ಟೆನಿಸನ್ ಹೀಗೆ ಹೇಳುತ್ತಾನೆ, ವರ್ಡ್ಸ್ ವರ್ಥ್ ಹಾಗನ್ನುತ್ತಾನೆ ಎಂದು ಹೇಳಬೇಕಾದರೆ ಅವರು ಎಷ್ಟು ಓದಿಕೊಂಡಿರಬೇಕು ಎಂಬ ಕಲ್ಪನೆ ಇರುತ್ತೆ ಅಲ್ಲವ ನಿನಗೆ. ಬಹಳಷ್ಟು ಜನಕ್ಕೆ ಅಷ್ಟು ಅಗಾಧವಾಗಿ ಓದಲು ಸಮಯವಿರುವುದಿಲ್ಲ ಅಥವ ಇರುವ ಸಾಹಿತ್ಯ ಸಾಗರದಲ್ಲಿ ಯಾವ ನದಿಯ ನೀರು ಕುಡಿಯಬೇಕೆಂದು ತಿಳಿದಿರುವುದಿಲ್ಲ. ಎಲ್ಲರೂ ಸಾಹಿತ್ಯದ ವಿದ್ಯಾರ್ಥಿಗಳಾಗಿರುವುದಿಲ್ಲ. ಓದಿದವರು, ಇಂಥವರು ಹೀಗೆ ಬರೆದಿದ್ದರು ಅದನ್ನು ಓದಿದ ನನಗೆ ಹೀಗನಿಸಿತು, ಬೇರೊಂದು ಭಾಷೆಯ ಲೇಖಕ ಇದೇ ಕಾಂಟೆಕ್ಟಿನಲ್ಲಿ ಇನ್ನೆಂಥದೋ ಬರೆದಿದ್ದಾನೆ ಎಂದು ಹೇಳಿ ಆ ಹಿರಿಯ ಜೀವಿಗಳು, ಲೇಖಕರು ಬರೆದಿದ್ದ ಕವನದ, ಲೇಖನದ ಅಥವ ಕಥೆಯ ಕೆಲವು ಸಾಲುಗಳನ್ನು ಕೋಟ್ ಮಾಡಿದರೆ, ನಿಜವಾಗಿ ಸಾಹಿತ್ಯದಲ್ಲಿ ಆಸಕ್ತಿ ಕಾಳಜಿ ಇರುವವರು ಅದನ್ನು ಹುಡುಕಿಯಾದರೂ ಓದೋಲ್ಲವೆ...? ಬೇಂದ್ರೆಯವರ “ಇಳಿದು ಬಾ ತಾಯೆ, ಇಳಿದು ?...." ಅಂಥ ಪ್ರಸಿದ್ಧ ಕವನವೂ ಗೊತ್ತಿಲ್ಲದ ಸಾಹಿತ್ಯಾಸಕ್ತರಿಗೆ ಇಂಥ ಅಂಕಣಕಾರರಿಂದ ಸಹಾಯವಾಗೋಲ್ಲವಾ ಹೇಳು?

ಇನ್ನು? “ಡಿಫರೆಂಟಾಗಿ ಬರೆಯುವವರು..." ಎಂಬುದರ ಬಗ್ಗೆ ನಾನು ಏನೇ ಹೇಳಿದರೂ ಅದು “ಶುದ್ಧ ಸಮರ್ಥನೆ" ಅನಿಸಿಕೊಳ್ಳುತ್ತೆ ಅಲ್ಲವೆ?

ನಿನ್ನ ಚಾರ್ಲಿ ಸೆಂಟಿನ ಉದಾಹರಣೆಗೂ ಪಿಜ್ಜಾ ಬರ್ಗರ್ ಉದಾಹರಣೆಗೂ ಏನು ವ್ಯತ್ಯಾಸ ಹುಡುಗ ? ಈಗಲೂ ಮಲ್ಲಿಗೆ ಹೂವು ಮುಡಿಯುತ್ತಾರೆ. ಬದಲಾದ ಕಾಲಕ್ಕೆ ತಕ್ಕಂತೆ ನಿನ್ನ ಚಾರ್ಲಿ ಸೆಂಟಿನಲ್ಲಿ ಜಾಸ್ಮಿನ್ ಪರಿಮಳ ಇರುತ್ತದೆ.
Five point someoneನ ಲೇಖನವನ್ನೇ ತೆಗೆದುಕೋ. ಅವನು ಬೆಳೆದ ವಾತಾವರಣವನ್ನು ಅವನ ಕಾಲೇಜ್ ದಿನಗಳನ್ನು ವರ್ಣಿಸುವ five point someone ಇಷ್ಟವಾಗುತ್ತದೆ. one night at call centre ಮನಸ್ಸಿಗೆ ತಟ್ಟುವುದೇ ಇಲ್ಲ.... ಬದಲಾದ ರಾಮಾಯಣಗಳು ಬಹಳಷ್ಟಿವೆ... ನಿನಗೆ ಯಾವುದು ತುಂಬ ಇಷ್ಟವಾಯಿತು?

ಉಹುಂ ನೀನು ಹೇಳಿದ್ದು ತಪ್ಪು ಅನ್ನುತ್ತಿಲ್ಲ ನಾನು. ನಿಜ ಕನ್ನಡದಲ್ಲಿ ಫ್ಯಾಂಟಸಿ, ರೋಮಾನ್ಸ್, ಫಿಕ್ಷನ್ ,ಪರಮಾಣು, ನಕ್ಷತ್ರ ,ಕೃಷಿ ಎಲ್ಲದರ ಬಗ್ಗೆ ಬರೆಯಬೇಕು. ಆದರೆ ಈಗ ಇರುವ, ಬರುತ್ತಿರುವ ಸಾಹಿತ್ಯವನ್ನು ಬರೀ ಕೋಸಂಬರಿ ಎಂದರೆ ಅರ್ಥಹೀನ. ನಿನಗೆ ಇಷ್ಟ ಆಗುತ್ತಿಲ್ಲ ಅಂತ ಹೇಳು ಬೇಕಾದರೆ. ನಿನಗೆ ಇಷ್ಟವಾದದ್ದನ್ನು ಆರಿಸಿಕೊಂಡು ಓದು. ಎಲ್ಲರೂ ತೇಜಸ್ವಿ, ಕಾರಂತ, ಬಿ.ಜಿ.ಎಲ್. ಸ್ವಾಮಿ ಆಗಲು ಸಾಧ್ಯವಿಲ್ಲ. ಅಂಥ ಪ್ರತಿಭಾವಂತರಿದ್ದರೆ ಏನೇ ತಿಪ್ಪರಲಾಗ ಹಾಕಿದರೂ ಅವರ ಬೆಳವಣಿಗೆಯನ್ನು ತಡೆಯಲು ಸಾಧ್ಯವಿಲ್ಲ. survival of the fittest!

ಹೆಚ್ಚು ಹೇಳೋಲ್ಲ ನಾನು. ಇದಕ್ಕೆ ನೀನು ಉತ್ತರ ಬರೆಯಬಹುದು. ನಾನು ಉತ್ತರಿಸುವುದಿಲ್ಲ. ಪ್ರತಿಯೊಬ್ಬರೂ ತಮ್ಮ ಮೂಗಿನ ನೇರಕ್ಕೆ ವಾದ ಮಾಡಿಕೊಂಡು ಹೋದರೆ ನನಗೆ ಅಂಥ ವಾದಗಳಲ್ಲಿ ನಂಬಿಕೆ ಇಲ್ಲ. ಭೈರಪ್ಪನವರ ವಂಶವೃಕ್ಷದಲ್ಲಿ ಶ್ರೀನಿವಾಸ ಶ್ರೋತ್ರಿಗಳು ಹೇಳುವಂತೆ “ಮೂಲ ದೃಷ್ಟಿಯಲ್ಲೇ ಭಿನ್ನತೆ ಇರುವಾಗ ಚರ್ಚೆಯಿಂದ ಯಾವ ಪ್ರಯೋಜನವೂ ಇಲ್ಲ".

15 comments:

ಬಾಲು said...

monne vijaya karnatakadalli kathe odidaaga dangagi hode, gottiruva baravanigeya shaili, a pada punja galu.......

ನಿನ್ನ ಚಾರ್ಲಿ ಸೆಂಟಿನ ಉದಾಹರಣೆಗೂ ಪಿಜ್ಜಾ ಬರ್ಗರ್ ಉದಾಹರಣೆಗೂ ಏನು ವ್ಯತ್ಯಾಸ ಹುಡುಗ ? ಈಗಲೂ ಮಲ್ಲಿಗೆ ಹೂವು ಮುಡಿಯುತ್ತಾರೆ. ಬದಲಾದ ಕಾಲಕ್ಕೆ ತಕ್ಕಂತೆ ನಿನ್ನ ಚಾರ್ಲಿ ಸೆಂಟಿನಲ್ಲಿ ಜಾಸ್ಮಿನ್ ಪರಿಮಳ ಇರುತ್ತದೆ.
Five point someoneನ ಲೇಖನವನ್ನೇ ತೆಗೆದುಕೋ. ಅವನು ಬೆಳೆದ ವಾತಾವರಣವನ್ನು ಅವನ ಕಾಲೇಜ್ ದಿನಗಳನ್ನು ವರ್ಣಿಸುವ five point someone ಇಷ್ಟವಾಗುತ್ತದೆ. one night at call centre ಮನಸ್ಸಿಗೆ ತಟ್ಟುವುದೇ ಇಲ್ಲ.... ಬದಲಾದ ರಾಮಾಯಣಗಳು ಬಹಳಷ್ಟಿವೆ...

e saalugalanna yaake copy madide andre adu thumba ishta ayithu adakke.
Mruganayini andre Yaaridu?

Anonymous said...

ಹ್ಮ್ ಹುಡುಗಿ....
ಪುಟ್ಟ ಹುಡುಗನಿಗೆ ನಾನೂ ಇದನ್ನೇ ಹೇಳಬೇಕೆಂದುಕೊಂಡಿದ್ದೆ. ನಿನ್ನ ಇಂತದೇ ನೇರನುಡಿ ಇದೆಯಲ್ಲ ನನಗಿಷ್ಟವಾಗೋದು.

ಇಂತದೇ ಬರವಣಿಗೆಯಿಂದ ನೀನು ಹತ್ತಿರವಾಗ್ತೀಯ. ಮತ್ತಷ್ಟು ಇಷ್ಟವಾಗ್ತೀಯ.
ಆದರೂ ಹುಡುಗ ಬರೆದದ್ದು ಚೆನ್ನಾಗಿದೆ ಅನಿಸೋಲ್ವ? ಅವನ ಪ್ರಶ್ನೆಗಳಿಗೆ ನೀನಿಲ್ಲಿ ಉತ್ತರ ಕೊಡೋಕೆ ಅವನಿಂದ ಅವಕಾಶವಾಗಿ, ಹಲವಾರು ಮನಸುಗಳ ಪ್ರಶ್ನೆಗೆ ಉತ್ತರ ಸಿಕ್ಕಿತಲ್ವಾ?
ಪುಟ್ಟ ಹುಡುಗ ಹಾಗೂ ಪುಟ್ಟ ಹುಡುಗಿ ಇಬ್ಬರಿಗೂ ವಂದನೆ.
-ಹೀಗೊಬ್ಬಳು.

Susheel Sandeep said...

WHOAAAAA!!!!!

ನಿನ್ನ ಈ ಲೇಖನದ ಹಿನ್ನೆಲೆ ನಂಗೆ ಅಷ್ಟಾಗಿ ತಿಳಿದಿಲ್ಲ.ಆದ್ರೆ ಇದನ್ನ ಓದಿದ ಮೇಲೆ ನಿಮ್ಮಿಬ್ಬರ ನಡುವೆ ನಡೆದಿರಬಹುದಾದ ಆ ಸಣ್ಣ ವಾಗ್ಯುದ್ಧದ ಕಾಲಘಟ್ಟ,ಸುತ್ತಮುತ್ತಲಿನ ಪರಿಸರ,ನಿನ್ನ ಮನದಾಳದ ಇಂಗಿತದ ಅರಿವಂತೂ ಖಂಡಿತಾ ಆಯ್ತು!

[ವಿಜಯಕರ್ನಾಟಕದ ಹುಡುಕಾಟದಲ್ಲಿ ನಿರತ]-ನಾನೇ

mruganayanee said...

@ Baalu

ಧನ್ಯವಾದಗಳು... ಅಲ್ಲಿ ಓದಿ ಇಲ್ಲಿ ಬಂದು ಕಮೆಂಟಿಸಿದ್ದಕ್ಕೆ.

ನಾನು ಮಲ್ನಾಡ್ ಹುಡ್ಗಿ ಅಂತ ಉತ್ತರ ಕೊಟ್ಟರೆ ಯಾರು ಅಂತ ಗೊತ್ತಾಗುತ್ತಾ... :-)

@????ಏನಂತ ಕರೀಲಿ
ಹ್ಮ್ ಮ್ ಮ್... ನಿಮ್ಗೆ ಇಷ್ಟ ಆಯ್ತು ಅಂತ ಖುಷಿ ಆಯ್ತು. ಅವನ ಕಾಳಜಿ ಬಗ್ಗೆ ಪ್ರೀತಿ ಇದೆ ನಂಗೆ. ಧನ್ಯವಾದಗಳು ಹೀಗೆ ಬಂದು ನಿಮಗನ್ನಿಸಿದ್ದನ್ನ ಹೇಳಿದ್ದಕ್ಕೆ.

@Susheel

:-)... ನಿಂಗೆ ಅರ್ಥ ಆಯ್ಥು ಅಮ್ತ ಖುಷಿ ಆಯ್ಥು ಕಣೋ...

Sree said...

ಓಹ್ ಸಂಜೆಯಷ್ಟೇ ’ಆ’ ಪತ್ರ ಓದಿದೆ...ಯಾಕೋ ಶ್ರೀನಿವಾಸ ಶ್ರೋತ್ರಿಗಳ ಮಾತಿನ ಹಾಗೇ ಏನೋ ಅನಿಸಿ ಸುಮ್ಮನೇ ಬಂದುಬಿಟ್ಟೆ! ಚರ್ಚೆ ಚೆನ್ನಾಗಿದೆ, ಒಳ್ಳೇ ವಿಷಯ ಅನ್ನಿಸಿದ್ರೂ ನನ್ನದೊಂದು ಸಾಲು ಗೀಚೋಕೆ ಸೋಮಾರಿತನವೋ ಬೇಸರವೋ ಏನೋ...ಇರ್ಲಿ, ಇಲ್ಲಿ ಬರೆದಿರೋದು ನೋಡಿದಾಗ ಆಹ್ ಅಲ್ಲ್ವಾ ಅನ್ನಿಸಿತು - ಅಂಕಣಗಳ ಬಗ್ಗೆ, ಪ್ರತಿ ಕಾಲಘಟ್ಟದಲ್ಲಿ ಅದದೇ ಸಂದರ್ಭಗಳಿಗೆ ಬದಲಾಗುತ್ತಾ ಹೋಗುವ ಸ್ಪಂದನೆಗಳ ಬಗ್ಗೆ...ಇವೆಲ್ಲ...
ಆದ್ರೆ ಈ ’ಚೆನ್ನಾಗಿದೆ’ ಇದ್ಯಲ್ಲಾ, ಅದರ ಬಗ್ಗೆ ಮಾತ್ರ ಯಾಕೋ ತಲೆಕೆಡಿಸಿಕೊಳ್ಳೋದು ಜಾಸ್ತಿಯಾಗಿದೆಯೇನೋ ಅನ್ನಿಸ್ತು!:) ’ನಂಗೆ ಇಷ್ಟ ಆಯ್ತು’ ಅನ್ನೋ ಥರವೇ ನಂಗೆ ಚೆನ್ನಾಗಿದೆ ಅನ್ನಿಸ್ತು ಅಂತಲೂ ಸರಳವಾಗಿ ಯಾಕೆ ಅಂದ್ಕೋಬಾರದು? ಪಾಪ, ಈ ಚೆನ್ನಕ್ಕೆ ಯಾಕೆ ಯುನಿವರ್ಸಲ್ ಸಿಗ್ನಿಫಿಕೆನ್ಸನ್ನ ಆರೋಪಿಸಿ ಬಯ್ಯೋದು?

ಗಿರೀಶ್ ರಾವ್, ಎಚ್ (ಜೋಗಿ) said...

ಪ್ರಿಯ ಮೃಗನಯನೀ,
ನಾವು ಕಾಲೇಜು ಓದುತ್ತಿದ್ದ ದಿನಗಳಲ್ಲಿ ಹೀಗೆ ಚರ್ಚೆಗಳು ನಡೆಯುತ್ತಿದ್ದವು. ಒಂದು ಲೇಖನ ಹತ್ತಾರು ವಾಗ್ವಾದಗಳನ್ನು ಹುಟ್ಟುಹಾಕುತ್ತಿತ್ತು. ಅಂಥದ್ದೊಂದು ಪ್ರಕ್ರಿಯೆ ಮತ್ತೆ ಶುರುವಾಗಿದೆ.
ನಿನ್ನ ವಾದ ಚೆನ್ನಾಗಿದೆ. ವಿಕಾಸ ತುಂಬ ಸಿಟ್ಟಿನಿಂದ ವಾದಿಸಿದ್ದಕ್ಕೆ ನೀನು ತುಂಬ ನಿರುಮ್ಮಳವಾಗಿ ಉತ್ತರಿಸಿದ ಶೈಲಿ ಇಷ್ಟವಾಯಿತು.
ವಿಕಾಸನಿಗೆ ಹಾಗನ್ನಿಸುವುದಕ್ಕೆ ಕಾರಣಗಳಿವೆ. ಇವತ್ತು ಬರೆಯುತ್ತಿರುವವ ಪೈಕಿ ಎಲ್ಲರೂ `ಬರಹಗಾರ'ರು. ಅಲ್ಲಿ ವಿಮರ್ಶಕರಿಲ್ಲ. ಹಿರಿಯ ವಿಮರ್ಶಕರು ಹೊಸಬರ ಕೃತಿಗಳನ್ನು ಓದುವುದು ಕಡಿಮೆ. ಓದಿದರೂ ಬರೆಯುವುದು ಕಡಿಮೆ. ಚರ್ಚೆಸುವ ಹೊತ್ತಿಗೆ, ಉದಾಹರಣೆ ಕೊಡುವಾಗೆಲ್ಲ ಅವರಿಗೆ, ನನಗೂ ಕೂಡ, ನೆನಪಾಗುವುದು ಹಿರಿಯ ಬರಹಗಾರರ ಸಾಲುಗಳೇ.
ಇದಕ್ಕೆ ಕಾರಣ ಇಷ್ಟೇ. ಅದನ್ನು ಹೊಸ ಬರಹಗಾರರ ಮೇಲಿನ ಅಸಡ್ಡೆ ಎಂದು ಭಾವಿಸಬಾರದು. ನಮಗೆ ನೆನಪಲ್ಲಿ ಉಳಿಯುವುದು ನಾವು ಬಾಲ್ಯದಲ್ಲಿ ಹದಿಹರೆಯದಲ್ಲಿ ತಾರುಣ್ಯದಲ್ಲಿ ಓದಿದ್ದು ಮಾತ್ರ. ಆಗ ಓದುವಷ್ಟು ತೀವ್ರವಾಗಿ ಈಗ ಓದುವುದು ಕಷ್ಟ.
ನವೋದಯ, ನವ್ಯ ಕಾಲಾವಧಿಯಲ್ಲಿ ಲೇಖಕರ ನಡುವೆಯೇ ಸಹಮತ, ಭಿನ್ನಾಭಿಪ್ರಾಯ, ಜಗಳಗಳಿದ್ದವು. ಒಬ್ಬರು ಇನ್ನೊಬ್ಬರ ಬರಹ ಓದಿ ಅದಕ್ಕಿಂತ ಚೆನ್ನಾಗಿ ಬರೆಯಬೇಕು ಎಂದು ಪಣತೊಟ್ಟವರಂತೆ ಬರೆಯುತ್ತಿದ್ದರು. ಪರಸ್ಪರ ವಿಮರ್ಶೆ ಮಾಡಿಕೊಳ್ಳುತ್ತಿದ್ದರು. ಮೀರಿಸುವ ತುಡಿತದಲ್ಲೇ ಮೆಚ್ಚಿಕೊಳ್ಳುವುದೂ ನಡೆಯುತ್ತಿತ್ತು. ಹೀಗಾಗಿ ಸಾಹಿತ್ಯ ಸೃಷ್ಟಿ ಕ್ರಿಯೆ ಒಂದು ಸಾಂಘಿಕ ಚಟುವಟಿಕೆಯಂತೆ ಭಾಸವಾಗುತ್ತಿತ್ತು. ಅನಂತಮೂರ್ತಿ, ತೇಜಸ್ವಿ, ದೇವನೂರು, ಆಲನಹಳ್ಳಿ, ಕಂಬಾರ, ವೆಂಕಟೇಶಮೂರ್ತಿ, ತಿರುಮಲೇಶ್, ಚಿತ್ತಾಲ, ಜಯಂತ್ , ಲಂಕೇಶ್ ಮುಂತಾದವರೆಲ್ಲ ಮತ್ತೇನು ಬರೆಯುತ್ತಾರೋ ಎಂದು ಕುತೂಹಲದಿಂದ ಕಾಯುತ್ತಿದ್ದೆವು.
ಅವರನ್ನೆಲ್ಲ ಅಷ್ಟು ಪ್ರೀತಿಯಿಂದ, ವಿಮರ್ಶಾತೀತ ಪ್ರೀತಿಯಿಂದ, ಓದಿದಾಗ ಅವರ ಚಿಂತನೆ, ಸಾಲುಗಳೆಲ್ಲ ನೆನಪಿರುವುದು ಸಹಜವೇ.
ಈಗ ಹಾಗೆ ಪರಸ್ಪರರ ಕೃತಿಗಳನ್ನು ಓದಿ ಮೆಚ್ಚುವುದಕ್ಕೊಂದು ತಾಣ ಬೇಕು, ವೇದಿಕೆ ಬೇಕು. ಹೊಸ ಬರಹಗಾರರೆಲ್ಲ ಸೇರಿ, ಒಂದು ವೇದಿಕೆ ಮಾಡಿಕೊಂಡು ಹದಿನೈದು ದಿನಕ್ಕೋ ವಾರಕ್ಕೋ ಒಬ್ಬ ಹೊಸ ಲೇಖಕನನ್ನು ಪರಿಚಯಿಸುವ ಕೆಲಸ ಮಾಡಬಹುದು. ಎಲ್ಲರೂ ಬರೆಯಬಹುದಾದ ಒಂದು ಬ್ಲಾಗಿನಲ್ಲೋ, ವೆಬ್ ಸೈಟಿನಲ್ಲೋ ಹೊಸ ಲೇಖಕರ ಆಯ್ದ ಕೃತಿಗಳನ್ನು ಹಾಕಿ, ಅವರನ್ನು ಪರಿಚಯಿಸಬಹುದು. ಪತ್ರಿಕೆಗಳ ಜೊತೆಗೂ ಮಾತಾಡಿ, ಅಲ್ಲೂ ಆ ವಾರದ ಕಾರ್ಯಕ್ರಮದ ವಿವರ ಬರುವಂತೆ ವ್ಯವಸ್ಥೆ ಮಾಡಬಹುದು.
ಓದುಗರ ಸಂಖ್ಯೆ ಹೆಚ್ಚಾಗಿದೆ. ಅವರಿಗೆ ಇಂಥವರನ್ನು ಓದಿ ಎಂದು ಹೇಳುವವರು ಬೇಕಾಗಿದ್ದಾರೆ. ಈ ನಿಟ್ಟಿನಲ್ಲಿ ನಾನಂತೂ ವಾರಕ್ಕೊಬ್ಬ ತರುಣ ಬರಹಗಾರ, ಬರಹಗಾತಿಯನ್ನು ಪರಿಚಯಿಸುವುದಕ್ಕೆ ಆರಂಭಿಸುತ್ತೇನೆ.
ನಮ್ಮೆಲ್ಲರ ಸಂಕಷ್ಟಗಳೂ ಒಂದೇ. ಕನ್ನಡದ ಹೊಸ ಕಥೆಗಾರರ ಕುರಿತ ಯಾವುದೇ ಸಂಕಲನ ಅಮರೇಶ ನುಗಡೋಣಿಯ ಕತೆಗೆ ನಿಲ್ಲುತ್ತದೆ. ಆಮೇಲಿನ ಲೇಖಕರು ಒಬ್ಬರೋ ಇಬ್ಬರೋ ಆ ಕೃತಿಯ ಸಂಪಾದಕರಿಗೆ ಪರಿಚಯ ಇದ್ದರಷ್ಟೇ ಪುಸ್ತಕದಲ್ಲಿ ಸೇರ್ಪಡೆ ಆಗುತ್ತಾರೆ. ಇದನ್ನು ಮೀರುವುದೂ ನಮ್ಮ ಕೈಲೇ ಇದೆ. ಲಂಕೇಶರು ಅಕ್ಷರ ಹೊಸ ಕಾವ್ಯ ತಂದ ಹಾಗೆ, ನವ್ಯ ಕತೆಗಳ ಸಂಕಲನಗಳು ಬಂದ ಹಾಗೆ, ಬಂಡಾಯ ಕತೆಗಳ ಸಂಕಲನ ಬಂದಂತೆ, ಈ ಕಾಲದವರ ಕತೆ ಕವಿತೆ ಪ್ರಬಂಧಗಳ ಸಂಕಲನವೂ ಬರಬೇಕಿದೆ. ಆ ಕೆಲಸವನ್ನು ನಾವೇ ಮಾಡಬೇಕು. ಹಿರಿಯ ವಿಮರ್ಶಕರು ಮಾಡಬೇಕೆಂದು ನಿರೀಕ್ಷಿಸುವುದು ಅತಿಯಾಸೆಯೂ ಸೋಮಾರಿತನವೂ ಆಗುತ್ತದೆ.
ನಿಮಗೆ ಹಾಗನ್ನಿಸುವುದಿಲ್ಲವೇ.
ಇಷ್ಟನ್ನು ಹೇಳುವ ಅವಕಾಶ ಮಾಡಿಕೊಟ್ಟದ್ದಕ್ಕೆ ಥ್ಯಾಂಕ್ಸ್.

ಹರೀಶ್ ಕೇರ said...

Jogi OK
Nayani OK
Vikas OK
jagala yake ?
- Harish Kera

Anonymous said...

ಹುಡುಗಿ,
ನೀನಿನ್ನೂ ಕನ್ನಡ ಸಾಹಿತ್ಯಕ್ಕೆ ಅಮ್ಬೇಗಾಲಿಕ್ಕುತಿರುವ ಹುಡುಗಿ!, ಓದಬೇಕಗಿದ್ದು ಬಹಳಸ್ತಿದೆ, ಅದಕ್ಕಿಂತ ಅರ್ತ ಮಾಡಿಕೊಲ್ಲಬೇಕಗಿದ್ದು ಬೆಟ್ಟದಷ್ಟಿದೆ!.
ವಿ.ಹೆ

Anonymous said...

hAge indina bahutheka yuva mattu tammashtakke thaave prabhuddru andukonda barahagaararige thathakshaNada mechhuge, janapriyathe khayali jaasthi.. adakke thakkanthe avara bennannu ivaru, ivara bennannu avru kereyuvudee maha vimarshe anno brame bere.. adella bittu; bareyuva munna nanna hinde ondu dodda parampare ide.. anthaha baraha parampareyalli naanu elli nilluthhene emba kanishta vinaya mattu gumpu(ella bageya saNNathana) meeri bareyuvudu, maathanaduva praamaNikathe rUdhisikolli... nanageno vikas heLiddu sariyage ide annisthu.. swalpa vyangya jasthi... mruganayanee innashtu praamanikatheinda avara maathannu punarmanana madikondu prathikriyisiddare chennagittu...

Anonymous said...

hAge indina bahutheka yuva mattu tammashtakke thaave prabhuddru andukonda barahagaararige thathakshaNada mechhuge, janapriyathe khayali jaasthi.. adakke thakkanthe avara bennannu ivaru, ivara bennannu avru kereyuvudee maha vimarshe anno brame bere.. adella bittu; bareyuva munna nanna hinde ondu dodda parampare ide.. anthaha baraha parampareyalli naanu elli nilluthhene emba kanishta vinaya mattu gumpu(ella bageya saNNathana) meeri bareyuvudu, maathanaduva praamaNikathe rUdhisikolli...

ಪ್ರಾಮಾಣಿಕತೆಯ ಬಗ್ಗೆ ಮಾತಾಡುವವನು ಮೊದಲು ತನ್ನ ಹೆಸರನ್ನು ಹೇಳುವ ಧೈರ್ಯ ಮಾಡಬೇಕು. ಮರೆಯಲ್ಲಿ ನಿಂತು ಮತ್ತೊಬ್ಬರ ಪ್ರಾಮಾಣಿಕತೆಯ ಬಗ್ಗೆ ಮಾತಾಡುವುದೇ ಅಪ್ರಾಮಾಣಿಕತೆ.

mruganayanee said...

@Venky....

did u really read this....? :-)

@Shree...
ಧನ್ಯವಾದಗಳು. ನನ್ಗೆ ಯಾಕೋ ಈ 'ಚನ್ನಾಗಿದೆ', 'ಒಳ್ಳೆಯತನ', 'ಪ್ರಾಮಾಣಿಕತೆ' ಅನ್ನೋ ಪದಗಳು ತುಂಬಾ ಕಾಡುತ್ತವೆ....

@ಜೋಗಿ

ನೀವು ಹೇಳಿದ್ದೆಷ್ಟು ಅರ್ಥವಾಯಿತು ಅಂತ ತಿಳಿದುಕೊಳ್ಳಲು ಮತ್ತೆ ಮತ್ತೆ ಓದುತ್ತಿದ್ದೇನೆ..... ಹೀಗೆ ನೀವು ಬಂದು ಕಮೆಂಟಿಸಿದ್ದು ಖುಶಿ ನೀಡಿತು.ಆದರೆ ಕೊನೆಯ ಒಂದು ಸಾಲು ಬೇಕಿರಲಿಲ್ಲ..

@ ಹರೀಶ್ ಕೇರ..

ಉಹು ಇದು ಜಗಳ ಅಲ್ಲ... :-)

@ಚಿತ್ರಗುಪ್ತ
:-)

Shree said...

ha ha olle thamashi kane ;nange navu chikkor iddaga olledu matthe kettadu anno vishyad bagge vadha madidvi gapka idiya aga nan gold wid little of copperna gold antha nee karithivi antha helidde innu yeneno ee nina prathivada odaga nina agina mathe egina bhavagalu change agilla annisthide nin yen helthiya

ಬಾಲು said...

ಒಹ್ಹ್ ತಾವು ಚಿಕ್ಕ ಮಗಳೂರು ಜಿಲ್ಲೆ ಅವರು!!!! :) ಆದ್ರೆ ಯಾರು ಅಂತ ಕಂಡಿತಾ ತಿಳಿಲಿಲ್ಲ..... :(

Anonymous said...

Sorry for my comments in English.

I agree with Jogi. I do not agree that Kannada literature has become stagnant without any novel ideas or experiments. In fact, we have almost the same or even more variety and vivacity now than any other period. I do not think that any one of us can comment on this part without a systematic study of the current kannada literature like Jogi has mentioned. WE need to do it as opposed to thinking that someone else will do it.

Guruprasad Kaginele

mruganayanee said...

@ Putti

I do remember all those darling... It was fun. I think now I am more clear in those views

@Baalu

:-)

@Guruprasad kaaginele

thanks for ur view...